ಮಳೆಗಾಲ ಬಂತು ಅಂದರೆ ಸಾಕು ಏನಾದ್ರೂ ತಿಂಡಿ ತಿನ್ನಬೇಕು ಅನಿಸುತ್ತದೆ. ಮಲೆನಾಡು ಶೈಲಿಯಾ ಬಿಸಿ ಬಿಸಿ ಪತ್ರೋಡೆ ತಿನ್ನುವುದೇ ಒಂದು ರೀತಿ ಮಜಾ.
ಪತ್ರೊಡೆಯನ್ನು ತಯಾರಿಸುವುದು ಸ್ವಲ್ಪ ಕಷ್ಟವಾದರೂ, ಬಹಳ ರುಚಿಯಿರುವ ಕಾರಣ ಬಹುತೇಕರು ಇದನ್ನು ಮನೆಯಲ್ಲಿ ಸಿದ್ಧಪಡಿಸುತ್ತಾರೆ ಸುಲಭವಾಗಿ ಪ್ರತೋಡೆ ಮಾಡುವುದು ಹೇಗೆ ನೋಡಿಕೊಂಡು ಬರೋಣ
ಬೇಕಾಗುವ ಸಾಮಾಗ್ರಿಗಳು
ಕೆಸುವಿನ ಎಲೆ ( 30 ರಿಂದ 35)
ಒಂದು ಕಪ್ ಅಕ್ಕಿ ಮುಕ್ಕಾಲು ಕಪ್
ತೊಗರಿಬೇಳೆ ಅರ್ಧ ಕಪ್
ಕಡಲೆಬೇಳೆ
ಒಣಮೆಣಸು
ಸ್ವಲ್ಪ ಹುಣಸೆ ಹಣ್ಣು ಒಣಮೆಣಸು
ಒಂದು ಚಮಚ ಜೀರಿಗೆ ಕೊತ್ತಂಬರಿ ಕಾಳು
ಮೂರು ಚಮಚ ಒಂದು ಚಮಚ ಜೀರಿಗೆ ಇಂಗು ಸ್ವಲ್ಪ ಬೆಲ್ಲ
ಮಾಡುವ ವಿಧಾನ
ಮೊದಲಿಗೆ ಅಕ್ಕಿ, ತೊಗರಿಬೇಳೆ, ಕಡಲೆಬೇಳೆ, ಜೀರಿಗೆ ಮತ್ತು ಕೊತ್ತಂಬರಿಯನ್ನು ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ನೆನಸಿಡಬೇಕು.ಇದು ಮೂರು ಗಂಟೆ ನೆನೆಯಬೇಕು. ನೀರಿನಲ್ಲಿ ನೆನದ ಬಳಿಕ ಇದನ್ನು ಚೆನ್ನಾಗಿ ರುಬ್ಬಬೇಕು. ರುಬ್ಬಿದ ಹಿಟ್ಟು ದಪ್ಪವಾಗಿರಬೇಕು. ನಂತರ 10 ನಿಮಿಷ ನೀರಿನಲ್ಲಿ ನೆನೆಸಿದ ಹುಣಸೆಹಣ್ಣು, ಒಣಮೆಣಸು ಮತ್ತು ಬೆಲ್ಲವನ್ನು ರುಬ್ಬಿಕೊಳ್ಳಬೇಕು.
ರುಬ್ಬಿದ ಹಿಟ್ಟಿಗೆ ಹುಣಸೆಹಣ್ಣು, ಒಣಮೆಣಸು ಮತ್ತು ಬೆಲ್ಲದ ಪೇಸ್ಟ್ನ ಹಾಕಿ ಚೆನ್ನಾಗಿ ಮಿಶ್ರಣಗೊಳಿಸಿ. ಇದಕ್ಕೆ ಉಪ್ಪು ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ತೊಳೆದ ಎಲೆಗಳನ್ನು ಒಂದೊಂದಾಗಿ ತೆಗೆದುಕೊಂಡು ಎರಡು ಕಡೆ ಸಿದ್ಧವಾಗಿರುವ ಮಿಶ್ರಣವನ್ನು ಹಚ್ಚಿ. ಮೊದಲು ಹೀಗೆ 5 ರಿಂದ 6 ಎಲೆಗಳಿಗೆ ಹಚ್ಚಿ. ಹಚ್ಚಿದ ದೊಡ್ಡ ಎಲೆಯ ಮೇಲೆ ಒಂದೊಂದಾಗಿ ಸಣ್ಣ ಎಲೆಗಳನ್ನು ಇಟ್ಟು, ರೋಲ್ ರೀತಿ ಸುತ್ತಿ. ಸುತ್ತಿದ ಬಳಿಕ ಆ ರೋಲ್ಗೆ ಮತ್ತೆ ಸ್ವಲ್ಪ ಹಿಣ್ಣಿನ ಮಿಶ್ರಣವನ್ನು ಹಚ್ಚಿ. ಹೀಗೆ ಎಲ್ಲ ಎಲೆಗಳಿಗೂ ಹಿಟ್ಟನ್ನು ಹಚ್ಚಿ ರೋಲ್ ರೀತಿ ಮಾಡಿ.
ಎಲ್ಲಾ ಎಲೆಗಳ ಮೇಲೆ ಹಿಟ್ಟನ್ನು ಹಚ್ಚಿ, ರೋಲ್ ಮಾಡಿದ ನಂತರ ಇಡ್ಲಿ ಬೇಯಿಸುವಂತೆ ರೋಲ್ಗಳನ್ನ ಹಬೆಯಲ್ಲಿ ಬೇಯಿಸಬೇಕು. ಇದು ಬೇಯಲು ಅರ್ಧ ಗಂಟೆ ಬೇಕಾಗುತ್ತದೆ. ಬೆಂದ ನಂತರ ತಣ್ಣಗಾಗಲು ಬಿಡಿ. ಒಂದು ಚಾಕುವಿನಿಂದ ರೋಲ್ನ ತೆಳುವಾಗಿ ಕಟ್ ಮಾಡಿ. ಕಟ್ ಮಾಡಿದ ಪೀಸ್ಗಳನ್ನ ತವಾದಲ್ಲಿ ಎಣ್ಣೆ ಹಾಕಿ ಕರಿದರೆ ಪತ್ರೊಡೆ ಸವಿಯಲು ಸಿದ್ಧ.