ನಾನ್ವೆಜ್ ಪ್ರಿಯರ ನೆಚ್ಚಿನ ಊಟ ಅಂದರೆ ಅದು ಬಿರಿಯಾನಿ. ಬಿರಿಯಾನಿಯನ್ನು ಇಷ್ಟಪಡದೇ ಇರದವರು ಯಾರು ಇಲ್ಲ. ಬೆಳಗ್ಗೆ , ಮಧ್ಯಾಹ್ನ ಮತ್ತು ರಾತ್ರಿ ಮೂರು ಹೊತ್ತು ಬಿರಿಯಾನಿ ಕೊಟ್ಟರೂ ಅನೇಕ ಮಂದಿ ಬೇಸರವಿಲ್ಲದೇ ತಿನ್ನುತ್ತಾರೆ. ಚಿಕನ್ ಮಟನ್ ಅಷ್ಟೇ ಅಲ್ಲ ಫಿಶ್ ಬಿರಿಯಾನಿ ಕೂಡ ಇಷ್ಟಪಡುವವರು ಅನೇಕ ಮಂದಿ ಇದ್ದಾರೆ.
ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ. ಅದರಲ್ಲೂ ಮಟನ್ ಬಿರಿಯಾನಿಯೂ ಒಂದು. ಮಟನ್ ಬಿರಿಯಾನಿ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುತ್ತದೆ ನಾಲಿಗೆ ಬಿರಿಯಾನಿ ತಿನ್ನಲು ಬಯಸಿದಾಗ ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಮಟನ್ ಬಿರಿಯಾನಿಯನ್ನು ತಯಾರಿಸಬಹುದಾಗಿದೆ. ಇಂದೆ ಈ ರುಚಿಯಾದ ಮಟನ್ ಬಿರಿಯಾನಿ ಮಾಡಲು ಇಲ್ಲಿದೆ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
ಮಟನ್ 1/2 ಕೆಜಿ
ಅಕ್ಕಿ 1/2 ಕೆಜಿ
ಚಕ್ಕೆ 2″
ಲವಂಗ 4
ಬಿರಿಯಾನಿ ಎಲೆ 3
ಏಲಕ್ಕಿ 2
ಸೋಂಪು 1ಸ್ಪೂನ್
ಅನಾನಸ್ ಹೂ 1
ಪುದೀನ 1 ಕಟ್ಟು
ಉಪ್ಪು
ಅರಿಶಿನ
ಈರುಳ್ಳಿ 3-4
ಬೆಳ್ಳುಳ್ಳಿ 2 ಗಡ್ಡೆ
ಕೊತ್ತಂಬರಿ ಸೊಪ್ಪು
ಟೊಮೆಟೊ 2-3
ಹಸಿಮೆಣಸಿನಕಾಯಿ 15 ರಿಂದ 20
ಶುಂಠಿ 2″
ನೀರು ಅಕ್ಕಿಯ ಎರಡರಷ್ಟು
ಮಾಡುವ ವಿಧಾನ:
ಮಾಂಸವನ್ನು ಉಪ್ಪು ಅರಿಶಿಣ ಸ್ವಲ್ಪ ನೀರು ಸೇರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೊಳ್ಳಿ. ಶುಂಠಿ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು ಪುದೀನ ಎಲ್ಲಾ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಒಲೆಯ ಮೇಲೆ ಕುಕ್ಕರ್ ಇಡಿ. ಇದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿಯಾದ ಮೇಲೆ ಚಕ್ಕೆ ಲವಂಗ ಏಲಕ್ಕಿ ಬಿರಿಯಾನಿ ಎಲೆ ಮತ್ತು ಸೋಂಪು ಹಾಕಿ ಹುರಿಯಿರಿ ಈಗ ಈರುಳ್ಳಿ ಟೊಮೆಟೊ ಮತ್ತು ಪುದೀನ ಹಾಕಿ ಫ್ರೈ ಮಾಡಿ ನಂತರ ಬೇಯಿಸಿದ ಮಾಂಸ ಹಾಕಿ. ನೀರು ಹಾಕಿ ಕುದಿಸಿ ನಂತರ ಅಕ್ಕಿ ಉಪ್ಪು ಹಾಕಿ ಚೆನ್ನಾಗಿ ಬೆರೆಸಿ ಒಂದು ಕೂಗಿಸಿ. ಕುಕ್ಕರ್ ತಣ್ಣಾಗಾದ ಮೇಲೆ ತೆಗೆದು ಕೊತ್ತಂಬರಿ ಸೊಪ್ಪು ಹಾಕಿ ರುಚಿಯಾದ ಮಟನ್ ಬಿರಿಯಾನಿ ತಿನ್ನಲು ಸಿದ್ದರಾಗಿ.