ಸ್ವೀಟ್ ಕಾರ್ನ್ ಪಲಾವ್ ಬೆಳಗ್ಗೆ ಬ್ರೇಕ್ಫಾಸ್ಟ್ಗಾದರೂ ಸೈ, ಮನೆಗೆ ಗೆಸ್ಟ್ ಬಂದಿದ್ದಾಗ ಡಿನ್ನರ್ಗಾದರೂ ಸೈ. ಸ್ವೀಟ್ಕಾರ್ನ್ ಪಲಾವ್ ತುಂಬಾ ರುಚಿಕರವಾಗಿರುತ್ತದೆ. ಇದನ್ನು ಮಾಡುವ ವಿಧಾನ ಸುಲಭವಾಗಿದ್ದು ರುಚಿಕರವಾಗಿ ಮಾಡುವುದು ಹೇಗೆ ಎಂದು ಇಲ್ಲಿ ಹೇಳಿದ್ದೇವೆ ನೋಡಿ.
ಬೇಕಾಗುವ ಸಾಮಗ್ರಿ
ಬಾಸುಮತಿ ಅಕ್ಕಿ-ಒಂದು ದೊಡ್ಡ ಕಪ್
ಸ್ವೀಟ್ ಕಾರ್ನ್ 1 ಕಪ್
ತುಪ್ಪ 1 ಚಮಚ
ಈರುಳ್ಳಿ ಒಂದುಕಪ್ (ಉದ್ದುದ್ದವಾಗಿ ಕತ್ತರಿಸಿದ್ದು)
ಗರಂ ಮಸಾಲ ಒಂದು ಚಮಚ
ಶುಂಠಿ, ಬೆಳ್ಳುಳ್ಳಿ ಒಂದು ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸಿನಕಾಯಿ 2-3
ಲವಂಗ 5-6
ಏಲಕ್ಕಿ 1
ಚಕ್ಕೆ ಒಂದು ಪೀಸ್
ನೀರು 2ಕಪ್
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ..
ಅಕ್ಕಿಯನ್ನು 10 ನಿಮಿಷ ನೆನೆಹಾಕಿ. ಪ್ಯಾನ್ ಬಿಸಿ ಮಾಡ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿ. ಈಗ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಇವೆಲ್ಲಾ ಹಾಕಿದಾಗ ಘಂ ಎನ್ನುವ ಪರಿಮಳ ಬೀರುತ್ತದೆ, ಈಗ ಸ್ವೀಟ್ ಕಾರ್ನ್ ಹಾಕಿ ಫ್ರೈ ಮಾಡಿ. ಜೋಳ ಸ್ವಲ್ಪ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ. ಈಗ ಅಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು, ಗರಂ ಮಸಾಲ. 2 ಕಪ್ ನೀರು ಸೇರಿಸಿ. ಈಗ ಪಾತ್ರೆಯ ಬಾಯಿ ಮುಚ್ಚಿ ಅನ್ನ ಬೇಯುವವರೆಗೆ ಬೇಯಿಸಿ, ನಂತರ ಒಮ್ಮೆ ಮಿಕ್ಸ್ ಮಾಡಿ ಏನಾದರೂ ಗ್ರೇವಿ ಜೊತೆ ಸರ್ವ್ ಮಾಡಿ.