Food

ಚುಮುಚುಮು ಚಳಿಗೆ ಸಿಂಪಲ್‌ ಎಗ್ ರೈಸ್ ತಿನ್ನಬೇಕೆ. ಈ ರೀತಿ ಒಮ್ಮೆ ಟ್ರೈ ಮಾಡಿ

ರೆಸಿಪಿ : ಚುಮುಚುಮು ಚಳಿಗೆ ಏನಾದ್ರೂ ಬಿಸಿಬಿಸಿಯಾಗಿ ತಿನ್ನಬೇಕು ಎಂದು ಹೇಳುವವರೇ ಹೆಚ್ಚು ಅದರಲ್ಲೂ ರೈಸ್‌ ನಲ್ಲಿ ಏನು ಮಾಡಬಹುದು ಅನ್ನೋರಿಗೆ ಮನೆಯಲ್ಲಿಯೇ ಸಿಂಪಲ್ ಆಗಿ ಎಗ್ ರೈಸ್ ಮಾಡುವ ವಿಧಾನ ನೀವು ತಿಳಿದುಕೊಳ್ಳಬೇಕೆ ಇಲ್ಲಿದೆ ಮಾಹಿತಿ

ಬೇಕಾಗುವ ಸಾಮಾಗ್ರಿಗಳು
1. ಮೊಟ್ಟೆ – 2-3
2. ಅನ್ನ – 1 ಬಟ್ಟಲು
3. ದಪ್ಪ ಈರುಳ್ಳಿ – 1, ಸಣ್ಣಗೆ ಹೆಚ್ಚಿದ್ದು
4. ಹಸಿ ಮೆಣಸಿನಕಾಯಿ – 5ರಿಂದ6
(ಖಾರದ ಪುಡಿ ಬೇಕಾದ್ರೆ ಬಳಸಬಹುದು)
5. ಬೆಳ್ಳುಳ್ಳಿ, ಶುಂಠಿ ಪೇಸ್ಟ್ – 1 ಚಮಚ
6. ಗರಂ ಮಸಾಲ – ಒಂದೂವರೆ ಚಮಚ
7. ಕಡ್ಲೆಬೇಳೆ – 1-2 ಚಮಚ
8. ನಿಂಬೆಹಣ್ಣು – ಅರ್ಧ ಹೋಳು
9. ಕೊತ್ತಂಬರಿ ಸೊಪ್ಪು – ಸ್ವಲ್ಪ
10. ಅರಿಶಿನ ಪುಡಿ – ಚಿಟಿಕೆ
11. ಜೀರಿಗೆ+ಸಾಸಿವೆ – ಅರ್ಧ ಚಮಚ
12. ಉಪ್ಪು – ರುಚಿಗೆ ತಕ್ಕಷ್ಟು
13. ಎಣ್ಣೆ – 3-4 ಚಮಚ

ಮಾಡುವ ವಿಧಾನ
* ಮೊದಲಿಗೆ ಒಂದು ಪ್ಯಾನ್‍ಗೆ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕಡ್ಲೆಬೇಳೆ ಹಾಕಿ ಫ್ರೈ ಮಾಡಿರಿ.
* ಬಳಿಕ ಅದಕ್ಕೆ ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಸೇರಿಸಿ ಹಸಿ ವಾಸನೆ ಹೋಗೋ ತನಕ ಫ್ರೈ ಮಾಡಿ.
* ಎಲ್ಲವೂ ಫ್ರೈ ಆದ ಮೇಲೆ ಅದಕ್ಕೆ ಮೊಟ್ಟೆ ಒಡೆದು ಹಾಕಿ ಕಲಸಿರಿ.
* ಬಳಿಕ ಅದನ್ನು 2 ನಿಮಿಷ ಬಿಡಿ.
* ಮೊಟ್ಟೆ ಫ್ರೈ ಆದ ಮೇಲೆ ಅದಕ್ಕೆ ಬೇಯಿಸಿದ ಅನ್ನ, ಗರಂ ಮಸಾಲ, ಉಪ್ಪು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿರಿ.
* ಕೆಳಗಿಳಿಸುವಾಗ ನಿಂಬೆಹಣ್ಣು ಹಿಂಡಿ ಮತ್ತೊಮ್ಮೆ ತಿರುಗಿಸಿ.
* ಬಿಸಿಬಿಸಿಯಾಗಿ ರುಚಿರುಚಿಯಾದ ಎಗ್ ರೈಸ್ ಸವಿಯಲು ಸಿದ್ಧ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!