ಕುಲ್ಫಿ ಎಂದಕೂಡಲೇ ಎಲ್ಲರೂ ತಮ್ಮ ಬಾಲ್ಯದಲ್ಲಿ ರಸ್ತೆ ಬದಿಯಲ್ಲಿ ಇಲ್ಲವೇ ಊರಿಂದೂರಿಗೆ ತಳ್ಳುಗಾಡಿಯಲ್ಲಿ ಅಥವಾ ಸೈಕಲ್‍ನಲ್ಲಿ ಕುಲ್ಫಿ ಮಾರುವುದು ನೆನಪು ಆಗುತ್ತದೆ. ಇಂದು ನಾವು ತಂಪಾದ ಮತ್ತು ಆರೋಗ್ಯಕ್ಕೂ ಹಿತವೆನಿಸುವ ಸ್ಟ್ರಾಬೆರಿ ಓಟ್ಸ್ ಕುಲ್ಫಿ ಹೇಗೆ ಮಾಡಬಹುದು ಎಂಬುದನ್ನು ತಿಳಿಯೋಣ.
ಬೇಕಾಗುವ ಪದಾರ್ಥಗಳು :
ಓಟ್ಸ್ – ಒಂದೂವರೆ ಕಪ್
ಬೆಲ್ಲ – 3 ಟೀಸ್ಪೂನ್
ಜೇನುತುಪ್ಪ – 1 ಟೀಸ್ಪೂನ್
ಹಾಲು – ಒಂದೂವರೆ ಕಪ್
ಸ್ಟ್ರಾಬೆರಿ – 10
ಕತ್ತರಿಸಿದ ಬಾದಾಮಿ – 5
ಕತ್ತರಿಸಿದ ಪಿಸ್ತಾ – 5
ಕೇಸರಿ ಹಾಲು – ಚಿಟಿಕೆ (2 ಟೀಸ್ಪೂನ್ ಬೆಚ್ಚನೆಯ ಹಾಲಿನಲ್ಲಿ ನೆನೆಸಿಡಿ)
ಮಾಡುವ ವಿಧಾನ :
- ಮೊದಲಿಗೆ ಪ್ಯಾನ್ ಅನ್ನು ಬಿಸಿಗೆ ಇಟ್ಟು, ಓಟ್ಸ್ ಸೇರಿಸಿ ಮಧ್ಯಮ ಉರಿಯಲ್ಲಿ 5 ನಿಮಿಷ ಹುರಿಯಿರಿ.
- ಬಳಿಕ ಅದನ್ನು ತಣ್ಣಗಾಗಿಸಿ, ಮಿಕ್ಸರ್ ಜಾರಿಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ.
- ಸ್ಟ್ರಾಬೆರಿಗಳನ್ನು ಸ್ವಚ್ಛಗೊಳಿಸಿ, ಅದರ ತೊಟ್ಟನ್ನು ಬೇರ್ಪಡಿಸಿ. ಬಳಿಕ ಸ್ಟ್ರಾಬೆರಿಗಳನ್ನು ಮಿಕ್ಸರ್ ಜಾರಿಗೆ ಹಾಕಿ ಪ್ಯೂರಿ ತಯಾರಿಕೊಳ್ಳಿ.
- ಈಗ ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಬಳಿಕ ಪುಡಿ ಮಾಡಿದ ಓಟ್ಸ್, ಬೆಲ್ಲ, ಜೇನುತುಪ್ಪ, ಬಾದಾಮಿ, ಪಿಸ್ತಾ ಸೇರಿಸಿ, ಮಿಶ್ರಣ ಮಾಡಿಕೊಳಿ.
- ಉರಿಯನ್ನು ಮಧ್ಯಮದಲ್ಲಿಟ್ಟು 4-5 ನಿಮಿಷ ಕುದಿಸಿ, ಅದಕ್ಕೆ ಕೇಸರಿ ಸೇರಿಸಿ, ಉರಿಯನ್ನು ಆಫ್ ಮಾಡಿ ತಣ್ಣಗಾಗಲು ಬಿಡಿ.
- ಮಿಶ್ರಣ ತಣಗಾದ ಬಳಿಕ ಸ್ಟ್ರಾಬೆರಿ ಪ್ಯೂರಿಯನ್ನು ಸೇರಿಸಿ, ಮಿಶ್ರಣ ಮಾಡಿ.
- ಈಗ ಕುಲ್ಫಿ ಮೌಡ್‍ಗಳಿಗೆ ಮಿಶ್ರಣವನ್ನು ಸುರಿಯಿರಿ. ಅವುಗಳನ್ನು ಫ್ರೀಜರ್ ನಲ್ಲಿಟ್ಟು 5-6 ಗಂಟೆ ಗಟ್ಟಿಯಾಗಲು ಬಿಡಿ.
- ಕೆಲ ಗಂಟೆಗಳ ಬಳಿಕ ತಣ್ಣನೆಯ ಕುಲ್ಫಿ ತಯಾರಾಗಿದ್ದು, ಸವಿಯಲು ಸಿದ್ಧವಾಗುತ್ತದೆ.