ನಾನ್ವೆಜ್ ಇಷ್ಟಪಡೋರಿಗೆ ಸ್ಪೆಷನ್ ಆಗಿ ತಂದೂರಿ ಚಿಕನ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಇದನ್ನು ಮನೆಯಲ್ಲಿ ಮಾಡಿ ಆನಂದಿನ ಸವಿಯಿರಿ.
ಬೇಕಾಗುವ ಪದಾರ್ಥಗಳು :
ಎಣ್ಣೆ – 3 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – 1 ಟೀಸ್ಪೂನ್
ಅರಿಶಿನ ಪುಡಿ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಮೊಸರು – 1 ಕಪ್
ನಿಂಬೆ ರಸ – 2 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 4 ಎಸಳು
ಶುಂಠಿ ಪೇಸ್ಟ್ – 2 ಟೀಸ್ಪೂನ್
ಉಪ್ಪು – 1 ಟೀಸ್ಪೂನ್
ಸ್ಕಿನ್ಲೆಸ್ ಚಿಕನ್ ಲೆಗ್ ಪೀಸ್ – 4
ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ
ಮಾಡುವ ವಿಧಾನ :
- ಮೊದಲಿಗೆ ಪ್ಯಾನ್ನಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಕೊತ್ತಂಬರಿ, ಜೀರಿಗೆ, ಅರಿಶಿನ, ಗರಂ ಮಸಾಲಾ, ಕೆಂಪು ಮೆಣಸಿನ ಪುಡಿ ಸೇರಿಸಿ, ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಬಳಿಕ ತಣ್ಣಗಾಗಲು ಬಿಡಿ.
- ಒಂದು ಪಾತ್ರೆಯಲ್ಲಿ ಮೊಸರು ತೆಗೆದುಕೊಂಡು, ಅದಕ್ಕೆ ಹುರಿದಿಟ್ಟುಕೊಂಡ ಮಸಾಲೆ, ನಿಂಬೆ ರಸ, ಬೆಳ್ಳುಳ್ಳಿ, ಉಪ್ಪು, ಶುಂಠಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
- ಚಿಕನ್ ತುಂಡುಗಳನ್ನು ತೆಗೆದುಕೊಂಡು, ಅವುಗಳ ಮೇಲೆ ಚಾಕುವಿನಿಂದ 3-4 ಆಳವಾದ ಸೀಳುಗಳನ್ನು ಮಾಡಿಕೊಳ್ಳಿ.
- ಮೊಸರಿನ ಮಿಶ್ರಣದಲ್ಲಿ ಚಿಕನ್ ತುಂಡುಗಳನ್ನು ಅದ್ದಿ, ಮುಚ್ಚಿ, 5 ಗಂಟೆಗಳ ಕಾಲ ಫ್ರಿಜ್ನಲ್ಲಿ ಇಡಿ
- ಒಂದು ಪಾನ್ನಲ್ಲಿ 1-2 ಚಮಚ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಅಥವಾ ಗ್ರಿಲ್ ಅನ್ನು ಒಂದು ಬದಿ ನೇರವಾಗಿ ಶಾಖ ಬೀಳುವಂತೆ ಹಾಗೂ ಒಂದು ಬದಿ ಗ್ರಿಲ್ ಅನ್ನು ತಣ್ಣಗಿರಲು ಬಿಡಿ.
- ಮ್ಯಾರಿನೇಟ್ ಮಾಡಿರುವ ಚಿಕನ್ ಮಿಶ್ರಣವನ್ನು ತೆಗೆದುಕೊಂಡು ಅಲುಗಾಡಿಸಿ, ಬಿಸಿಯಾಗಿರುವ ಗ್ರಿಲ್ ಮೇಲಿರಿಸಿ.
- ಗ್ರಿಲ್ ಅನ್ನು ಕವರ್ ಮಾಡಿ, 2-3 ನಿಮಿಷ ಬೇಯಿಸಿ.
- ಬಳಿಕ ಚಿಕನ್ ತುಂಡುಗಳನ್ನು ಮಗುಚ ಹಾಕಿ ಇನ್ನೊಂದಿ ಬದಿಯಲ್ಲಿ 2-3 ನಿಮಿಷ ಬೇಯಿಸಿಕೊಳ್ಳಿ.
- ಚಿಕನ್ ತುಂಡುಗಳನ್ನು ಗ್ರಿಲ್ನ ಸ್ವಲ್ಪ ತಣ್ಣಗಿರುವ ಭಾಗದಲ್ಲಿ ಇಟ್ಟು, ಕವರ್ ಮಾಡಿ, 20-30 ನಿಮಿಷ ಬೇಯಿಸಿ.
- ಇದೀಗ ತಂದೂರಿ ಚಿಕನ್ ತಯಾರಾಗಿದ್ದು, 5 ನಿಮಿಷ ತಣ್ಣಗಾಗಲು ಬಿಟ್ಟು ಬಳಿಕ ಸವಿಯಿರಿ.