ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆ ಎಚ್ಚರವಹಿಸಬೇಕು. ಬಾಯಿ ರುಚಿಗೆ ತಿನ್ನಲು ಹೋದರೆ ಕಾಯಿಲೆ ಬೀಳ ಬೇಕಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು. ಮಳೆಗಾಲದಲ್ಲಿ ತಿನ್ನಬಾರದ ಆಹಾರಗಳು ಯಾವುವು ಅನ್ನುವ ಮಾಹಿತಿ ಇಲ್ಲಿದೆ ನೋಡಿ.
ಚಾಟ್ : ಚಾಟ್, ಗೋಲ್ ಗಪ್ಪಾ, ಬೇಲ್ ಪುರಿ, ದಹಿ ಪುರಿ ಇವುಗಳನ್ನು ಮಳೆಗಾಲದಲ್ಲಿ ತಿನ್ನಬೇಡಿ. ತಳ್ಳುಗಾಡಿಯಲ್ಲಿ ಸಿಗುವ ಈ ಚಾಟ್ಸ್ ಅಂತೂ ಮುಟ್ಟಲೇಬೇಡಿ. ಕಲ್ಮಶ ನೀರು ಕೂಡ ಮಿಕ್ಸ್ ಆಗುವ ಸಾಧ್ಯತೆ ಇದೆ. ಇವುಗಳನ್ನು ತಿನ್ನುವುದರಿಂದ ಹೊಟ್ಟೆ ನೋವು ಬರುವುದು ಖಂಡಿತ.
ಸಮುದ್ರ ಆಹಾರಗಳು ಹಾಗೂ ಹೊಳೆ ಮೀನು : ಈ ಸಮಯದಲ್ಲಿ ಮೀನುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವುದರಿಂದ ಮೀನಿನ ಆಹಾರಗಳನ್ನು ತಿನ್ನಬೇಡಿ. ಆಹಾರವನ್ನು ಹಸಿಯಾಗಿ ತಿನ್ನಬೇಡಿ
ತರಕಾರಿ : ಮಳೆಗಾಲದಲ್ಲಿ ಹಸಿ ತರಕಾರಿ ತಿನ್ನುವ ಬದಲು ಬೇಯಿಸಿ ತಿನ್ನುವುದು ಒಳ್ಳೆಯದು. ಕೆಲವೊಮ್ಮೆ ಹಸಿ ತರಕಾರಿ ತಿಂದಾಗ ಹೊಟ್ಟೆ ನೋವು ಬರಬಹುದು.
ಮಶ್ರೂಮ್ : ಮಳೆಗಾಲದಲ್ಲಿ ಅಣಬೆಗಳ ಮೇಲೆ ಬೇಗನೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವುದರಿಂದ ಇದನ್ನು ತಿಂದಾಗ ಆರೋಗ್ಯ ಸಮಸ್ಯೆ ಬರಬಹುದು.
ಮಾವಿನ ಹಣ್ಣು : ಮಾವಿನ ಹಣ್ಣು ಸೇವನೆ ಮಳೆಗಾಲಕ್ಕೆ ಸೂಕ್ತವಲ್ಲ. ಇದನ್ನು ತಿನ್ನುವುದರಿಂದ ವಾತ, ಕಫ ಸಮಸ್ಯೆ ಬರಬಹುದು.
ಬೀದಿ ಬದಿಯಲ್ಲಿ ಸಿಗುವ ಜ್ಯೂಸ್ : ಈ ಜ್ಯೂಸ್ಗೆ ಬಳಸುವ ನೀರು ಎಷ್ಟು ಶುದ್ಧವಾಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಬೀದಿ ಬದಿಯ ಜ್ಯೂಸ್ ಕುಡಿಯಲು ಹೋಗಬೇಡಿ.
ಕರಿದ ಪದಾರ್ಥಗಳು : ಕಚೋರಿ, ಸಮೋಸ, ಜಿಲೇಬಿ ಈ ರೀತಿ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ. ಇವುಗಳನ್ನು ತಿನ್ನುವುದರಿಂದ ಹೊಟ್ಟೆ ನೋವಿನ ಸಮಸ್ಯೆ ಬರಬಹುದು.
ಮೊಸರು : ಅಸ್ತಮಾ, ಸೈನಸ್ ಸಮಸ್ಯೆ ಇರುವವರು ಮಳೆಗಾಲದಲ್ಲಿ ಮೊಸರು ತಿನ್ನಬಾರದು