Food

ಸಿಹಿ ಸಿಹಿಯಾದ ಪನೀರ್ ಲಡ್ಡು ರೆಸಿಪಿ

ಹುಟ್ಟುಹಬ್ಬ ಇಲ್ಲವೇ ವಾರ್ಷಿಕೋತ್ಸವ, ಮನೆಯಲ್ಲಿ ಸಣ್ಣ-ಪುಟ್ಟ ಫಂಕ್ಷನ್ ಇರೋವಾಗ ಏನಾದರೂ ಸಿಹಿ ಮಾಡಬೇಕಲ್ವಾ. ಅದಕ್ಕೆ ನಾವು ಒಂದು ಸ್ಪೆಷಲ್ ಸಿಹಿಯಾದ ಸುಲಭದ ರೀತಿಯಲ್ಲಿ ಪನೀರ್ ಲಡ್ಡು ರೆಸಿಪಿ ಮಾಡೋದೋ ಹೇಗೆ ಎಂದು ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು :

ಪನೀರ್ – 200 ಗ್ರಾಂ
ಕಂಡೆನ್ಸ್ಡ್ ಮಿಲ್ಕ್ – ಮುಕ್ಕಾಲು ಕಪ್
ಕುದಿಸಿದ ಹಾಲು – ಕಾಲು ಕಪ್
ಸಕ್ಕರೆ – 1 ಟೀಸ್ಪೂನ್
ತುಪ್ಪ – ಅಗತ್ಯಕ್ಕೆ ತಕ್ಕಂತೆ
ಏಲಕ್ಕಿ – 2
ರೋಸ್ ಎಸೆನ್ಸ್ – 2 ಹನಿ
ಕೇಸರಿ – ಕೆಲವು ಎಸಳು
ಕತ್ತರಿಸಿದ ಪಿಸ್ತಾ – ಅಲಂಕಾರಕ್ಕೆ

ಮಾಡುವ ವಿಧಾನ:

  • ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರಿನಲ್ಲಿ ಪನೀರ್ ಅನ್ನು ಸುಮಾರು 10-15 ನಿಮಿಷಗಳ ವರೆಗೆ ಹಾಕಿ. ಇದರಿಂದ ಪನೀರ್ ಮೃದುವಾಗುತ್ತದೆ.
  • ಬಳಿಕ ಪನೀರ್ ಅನ್ನು ನೀರಿನಿಂದ ತೆಗೆದು, ಅದನ್ನು ಪುಡಿ ಮಾಡಿಕೊಳ್ಳಿ.
  • ಪನೀರ್ ಅನ್ನು ಮಿಕ್ಸರ್ ಜಾರ್ಗೆ ಹಾಕಿ, ಅದಕ್ಕೆ ಕುದಿಸಿ ಆರಿಸಿದ ಹಾಲು, ಕಂಡೆನ್ಸ್ಡ್ ಮಿಲ್ಕ್, ಕೇಸರಿ, ಏಲಕ್ಕಿ, ಸಕ್ಕರೆ ಹಾಗೂ ರೋಸ್ ಎಸೆನ್ಸ್ ಅನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.
  • ನಂತರ ರಬ್ಬಿದ ಮಿಶ್ರಣವನ್ನು ಒಂದು ಪ್ಯಾನೆಗೆ ಹಾಕಿ, ಮಧ್ಯದ ಉರಿಯಲ್ಲಿಟ್ಟು ಕೈಯಾಡಿಸುತ್ತಾ ದಪ್ಪವಾಗುವವರೆಗೆ ಬೇಯಿಸಿ.
  • ಬೇಯಿಸಿದ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ.
  • ಮಿಶ್ರಣ ಸ್ವಲ್ಪ ತಣ್ಣಗಾದ ಬಳಿಕ ಕೈಗಳಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ
  • ಪ್ರತಿ ಉಂಡೆಗಳಿಗೂ ಕತ್ತರಿಸಿದ ಪಿಸ್ತಾವನ್ನು ಇಟ್ಟು ಅಲಂಕರಿಸಿದರೆ ಪನೀರ್ ಲಡ್ಡು ತಯಾರಾಗುತ್ತದೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!