ಮಾವಿನ ಹಣ್ಣನ್ನು ವಿವಿಧ ಅಡುಗೆಗಳಲ್ಲಿ ಬಳಸಿದರೆ, ರುಚಿಗೆ ಹೊಸ ಟಚ್ ಸಿಗುವುದರೊಂದಿಗೆ ಸವಿಯಲು ಮಜವಾಗಿರುತ್ತದೆ. 30 ನಿಮಿಷಗಳಲ್ಲಿ ಮಾಡಬಹುದಾದ ರುಚಿಕರ ಮ್ಯಾಂಗೋ ಚಿಕನ್ ಸಿಹಿ ಹಾಗೂ ಖಾರವಾದ ಏಷ್ಯನ್ ಶೈಲಿಯ ರೆಸಿಪಿಯಾಗಿದೆ. ಇದನ್ನು ಅನ್ನ ಅಥವಾ ನೂಡಲ್ಸ್‌ನೊಂದಿಗೂ ಸವಿಯಬಹುದು. ಹಾಗಿದ್ದರೆ ಟೇಸ್ಟಿ ಮ್ಯಾಂಗೋ ಚಿಕನ್ ಮಾಡೋದು ಹೇಗೆಂದು ನೋಡೋಣ ಬನ್ನಿ…,
ಬೇಕಾಗುವ ಪದಾರ್ಥಗಳು:
ಚಿಕನ್ ಫ್ರೈಗೆ:
ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿದ ಮೂಳೆಗಳಿಲ್ಲದ ಕೋಳಿ ಮಾಂಸ – ಅರ್ಧ ಕೆಜಿ
ಕಾರ್ನ್ ಫ್ಲೋರ್ – ಕಾಲು ಕಪ್
ಮೈದಾ ಹಿಟ್ಟು – ಕಾಲು ಕಪ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಉಪ್ಪು – ಅರ್ಧ ಟೀಸ್ಪೂನ್
ಕರಿ ಮೆಣಸಿನಪುಡಿ – ಕಾಲು ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾಗುವಷ್ಟು
ಗ್ರೇವಿ ತಯಾರಿಸಲು:
ಎಣ್ಣೆ – 3 ಟೀಸ್ಪೂನ್
ಹೆಚ್ಚಿದ ಬೆಳ್ಳುಳ್ಳಿ – 2 ಟೀಸ್ಪೂನ್
ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾಪ್ಸಿಕಮ್ – 1
ಸೋಯಾ ಸಾಸ್ – 2 ಟೀಸ್ಪೂನ್
ರೆಡ್ ಚಿಲ್ಲಿ ಸಾಸ್ – 2 ಟೀಸ್ಪೂನ್
ಟೊಮೆಟೊ ಕೆಚಪ್ – 2 ಟೀಸ್ಪೂನ್
ಸ್ವೀಟ್ ಚಿಲ್ಲಿ ಸಾಸ್ – 4 ಟೀಸ್ಪೂನ್
ವಿನೆಗರ್ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕರಿ ಮೆಣಸಿನಪುಡಿ – ಅರ್ಧ ಟೀಸ್ಪೂನ್
ಕಾರ್ನ್ ಫ್ಲೋರ್ – 2 ಟೀಸ್ಪೂನ್
ನೀರು – 1 ಕಪ್
ಸಿಪ್ಪೆ ಸುಲಿದು ಕತ್ತರಿಸಿದ ಮಾವಿನ ಹಣ್ಣು – 1 ಕಪ್
ಮಾಡುವ ವಿಧಾನ:
* ಮೊದಲಿಗೆ ಚಿಕನ್ ಅನ್ನು ಶುಚಿಗೊಳಿಸಿ, ಒಣಗಿಸಿ ಇಟ್ಟಿಕೊಳ್ಳಿ.
* ಒಂದು ಬೌಲ್‌ಗೆ ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕರಿ ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ನಂತರ ಚಿಕನ್ ತುಂಡುಗಳನ್ನು ಆ ಬೌಲ್‌ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಬಳಿಕ ಚಿಕನ್ ತುಂಡುಗಳನ್ನು ಬಿಸಿ ಎಣ್ಣೆಯಲ್ಲಿ ಹಾಕಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿಕೊಳ್ಳಿ.
* ಈಗ ಒಂದು ಬಾಣಲೆ ತೆಗೆದುಕೊಂಡು ಅದರಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿಯಾದ ಬಳಿಕ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ ಕೆಲ ಸೆಕೆಂಡುಗಳ ವರೆಗೆ ಫ್ರೈ ಮಾಡಿಕೊಳ್ಳಿ.
* ಬಳಿಕ ಈರುಳ್ಳಿ ಮತ್ತು ಕ್ಯಾಪ್ಸಿಕಮ್ ಸೇರಿಸಿ ಒಂದು ನಿಮಿಷ ಹೆಚ್ಚಿನ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
* ನಂತರ ಸೋಯಾ ಸಾಸ್, ಸ್ವೀಟ್ ಚಿಲ್ಲಿ ಸಾಸ್, ರೆಡ್ ಚಿಲ್ಲಿ ಸಾಸ್, ಟೊಮೆಟೊ ಕೆಚಪ್, ವಿನೆಗರ್, ಉಪ್ಪು ಮತ್ತು ಕರಿ ಮೆಣಸಿನಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಒಂದು ಸಣ್ಣ ಬೌಲ್‌ನಲ್ಲಿ ಕಾರ್ನ್ ಫ್ಲೋರ್‌ಗೆ 1 ಕಪ್ ನೀರು ಸೇರಿಸಿ, ಗಂಟಿಲ್ಲದಂತೆ ಮಿಶ್ರಣ ಮಾಡಿಕೊಳ್ಳಿ.
* ನಂತರ ಸಾಸ್ ಮಿಶ್ರಣಕ್ಕೆ ಹುರಿದಿಟ್ಟಿದ್ದ ಚಿಕನ್, ಕಾರ್ನ್ ಫ್ಲೋರ್ ಮಿಶ್ರಣ ಹಾಗೂ ಮಾವಿನ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಇದೀಗ ಟೇಸ್ಟಿ ಮ್ಯಾಂಗೋ ಚಿಕನ್ ತಯಾರಾಗಿದ್ದು, ಬಿಸಿ ಅನ್ನ ಅಥವಾ ನೂಡಲ್ಸ್‌ನೊಂದಿಗೆ ಸವಿಯಿರಿ.