Food

ಸಬ್ಬಕ್ಕಿ ಮತ್ತು ಅವಲಕ್ಕಿ ಬಳಸಿ ಟೇಸ್ಟಿ ವಡೆ ರಸಿಪಿ

ಈ ರೆಸಿಪಿ ಸಂಜೆಯ ಸ್ನ್ಯಾಕ್ಸ್ ಆಗಿ ಚಹಾದೊಂದಿಗೆ ಸವಿಯಲು ಪರ್ಫೆಕ್ಟ್ ಆಗಿರುತ್ತದೆ. ವಡೆ ಎಂದರೆ ಹೆಚ್ಚು ಎಣ್ಣೆ ಇರುತ್ತದೆ ಎಂದು ನಿಮಗೆ ಎನಿಸಿದರೂ ಇದಕ್ಕೆ ಹೆಚ್ಚಿನ ಎಣ್ಣೆ ಬೇಕಾಗಿಲ್ಲ. ಈ ರೆಸಿಪಿ ಒಮ್ಮೆ ಟ್ರೈ ಮಾಡಿದ್ರೆ ಮತ್ತೆ ಬೇಕು ಅನುಸುತ್ತದೆ.

ಬೇಕಾಗುವ ಪದಾರ್ಥಗಳು :

ಸಬ್ಬಕ್ಕಿ – ಅರ್ಧ ಕಪ್
ಅವಲಕ್ಕಿ – 1 ಕಪ್
ಓಟ್ಸ್ ಹಿಟ್ಟು – 2 ಟೀಸ್ಪೂನ್
ಬೇಯಿಸಿ ಹಿಸುಕಿದ ಆಲೂಗಡ್ಡೆ – 1 ಕಪ್
ತುರಿದ ಕ್ಯಾರೆಟ್ – ಕಾಲು ಕಪ್
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – ಕಾಲು ಕಪ್
ಜೀರಿಗೆ ಪುಡಿ – 1 ಟೀಸ್ಪೂನ್
ಸಾಸಿವೆ – 1 ಟೀಸ್ಪೂನ್
ಕತ್ತರಿಸಿದ ಕರಿಬೇವಿನ ಎಲೆ – ಸ್ವಲ್ಪ
ಒಣ ಮಾವಿನ ಪುಡಿ – ಅರ್ಧ ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೀಸ್ಪೂನ್

ಮಾಡುವ ವಿಧಾನ :

  • ಮೊದಲಿಗೆ ಸಬ್ಬಕ್ಕಿಯನ್ನು ತೊಳೆದು 6 ಗಂಟೆ ನೆನೆಸಿಡಬೇಕು
  • ಅವಲಕ್ಕಿಯನ್ನು ತೊಳೆದು 5 ನಿಮಿಷ ಮೃದುವಾಗುವವರೆಗೆ ನೆನೆಸಿಡಿ
  • ಒಂದು ಪಾತ್ರೆಯಲ್ಲಿ ನೆನೆಸಿದ ಸಬ್ಬಕ್ಕಿ ಹಾಗೂ ಅವಲಕ್ಕಿಯನ್ನು ಹಾಕಿ, ಚೆನ್ನಾಗಿ ಕಳಿಸಿಕೊಳ್ಳಬೇಕು
  • ಈಗ ಅದಕ್ಕೆ ಹಿಸುಕಿದ ಆಲೂಗಡ್ಡೆಯನ್ನು ಸೇರಿಸಿ, ಮಿಶ್ರಣ ಮಾಡಿಕೊಳ್ಳಿ
  • ಒಂದು ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಗೂ ಕರಿಬೇವಿನ ಎಲೆ ಹಾಕಿ, ನಂತರ ಉರಿಯನ್ನು ಆಫ್ ಮಾಡಬೇಕು
  • ಒಗರಣೆ ಹಾಕಿದಕ್ಕೆ ಸಬ್ಬಕ್ಕಿ ಹಾಗೂ ಅವಲಕ್ಕಿ ಮಿಶ್ರಣ ಹಾಕಿ ಮಿಕ್ಸ್ ಮಾಡಿಕೊಳ್ಳಿ
  • ಈಗ ಕೈಗೆ ಎಣ್ಣೆಯನ್ನು ಸವರಿಕೊಂಡು, ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ವಡೆ ರೀತಿಯಲ್ಲಿ ತಟ್ಟಿಕೊಳ್ಳಿ
  • ಪ್ಯಾನ್‍ನಲ್ಲಿ ಸ್ವಲ್ಪ ಎಣ್ಣೆ ಹಾಕಿ, ನಂತರ ಎಣ್ಣೆ ಬಿಸಿಯಾದ ನಂತರ ವಡೆಗಳನ್ನು ಅದರಲ್ಲಿಟ್ಟು, ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿಬೇಕು
  • ಸಬ್ಬಕ್ಕಿ ಹಾಗೂ ಅವಲಕ್ಕಿಯ ವಡೆ ತಯಾರಾಗಿದ್ದು, ತೆಂಗಿನಕಾಯಿ ಚಟ್ನಿ ಅಥವಾ ಕಡಲೆಕಾಯಿ ಚಟ್ನಿಯೊಂದಿಗೆ ಅಥವಾ ಟೊಮೆಟೊ ಕೆಚಪ್ ಜೊತೆ ಸವಿಯಿರಿ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!