ಕುಂಬಳಕಾಯಿ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಹೀಗಿರುವಾಗ ಒಂದೇತರಹದ ಆಹಾರವನ್ನು ತಿಂದು ಬೇಜಾರವಾಗಿರುತ್ತದೆ. ಈ ಸಮಯದಲ್ಲಿ ಸಿಹಿ ಕುಂಬಳಕಾಯಿ ಓಟ್ಸ್ ಕುಕೀಸ್ ತಯಾರು ಮಾಡಿ ಒಮ್ಮೆ
ಬೇಕಾಗುವ ಸಾಮಾಗ್ರಿಗಳು
ಮೈದಾ ಹಿಟ್ಟು – 1 ಕಪ್
ದಾಲ್ಚಿನ್ನಿ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಅಡುಗೆ ಸೋಡಾ – ಅರ್ಧ ಟೀಸ್ಪೂನ್
ಮೊಟ್ಟೆಯ ಹಳದಿ ಭಾಗ – 1
ಸಿಹಿ ಕುಂಬಳಕಾಯಿ ಪ್ಯೂರಿ – ಅರ್ಧ ಕಪ್
ಕರಗಿಸಿದ ಬೆಣ್ಣೆ – ಅರ್ಧ ಕಪ್
ಬ್ರೌನ್ ಶುಗರ್ – ಅರ್ಧ ಕಪ್
ಸಕ್ಕರೆ ಪುಡಿ – ಕಾಲು ಕಪ್
ವೆನಿಲ್ಲಾ ಸಾರ – 1 ಟೀಸ್ಪೂನ್
ಓಟ್ಸ್ – ಅರ್ಧ ಕಪ್
ಮಾಡುವ ವಿಧಾನಗಳು
ಮೊದಲಿಗೆ ತಟ್ಟೆಯಲ್ಲಿ ಮೈದಾ ಹಿಟ್ಟು, ದಾಲ್ಚಿನ್ನಿ ಪುಡಿ, ಅಡುಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಪಕ್ಕದಲ್ಲಿ ಇಡಿ. ನಂತರ ಒಂದು ಬೌಲ್ ನಲ್ಲಿ ಬೆಣ್ಣೆ, ಕಂದು ಸಕ್ಕರೆ, ಸಕ್ಕರೆ ಪುಡಿ ಸೇರಿಸಿ, 1-2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿ.ಮೊಟ್ಟೆಯ ಹಳದಿ ಭಾಗ, ವೆನಿಲ್ಲಾ ಸಾರ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಕುಂಬಳಕಾಯಿ ಪ್ಯೂರಿಯನ್ನು ಸೇರಿಸಬೇಕು. ಈಗ ಒಣ ಪದಾರ್ಥಗಳನ್ನು ಈ ಮಿಶ್ರಣಕ್ಕೆ ಸೇರಿಸಿ, ನಿಧಾನವಾಗಿ ಬೆರೆಸಿ. ನಂತರ ಓಟ್ಸ್ ಅನ್ನು ಮಿಶ್ರಣಕ್ಕೆ ಹಾಕಿ ಬೆರೆಸಿ.ಈಗ ಪಾತ್ರೆಗೆ ಪ್ಲಾಸ್ಟಿಕ್ ಕವರ್‌ನಿಂದ ಬಿಗಿಯಾಗಿ ಮುಚ್ಚಿ, 30 ನಿಮಿಷಗಳ ಕಾಲ ವಿಶ್ರಾಂತಿ ನೀಡಿ. ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ, ಬೇಕಿಂಗ್ ಶೀಟ್‌ಗೆ ಬಟರ್ ಪೇಪರ್ ಅನ್ನು ಹೊದಿಸಿ ಇಡಿ.ಈಗ ಸುಮಾರು ಒಂದೂವರೆ ಚಮಚದಷ್ಟು ಮಿಶ್ರಣ ಬರುವಂತೆ ಕುಕೀಸ್ ಆಕಾರದಲ್ಲಿ ಬೇಕಿಂಗ್ ಶೀಟ್ ಮೇಲೆ ಹಾಕಿಕೊಳ್ಳಿ. ಪ್ರತಿ ಹಿಟ್ಟಿನ ಭಾಗಗಳ ನಡುವೆ ಸ್ವಲ್ಪ ಸ್ವಲ್ಪ ಅಂತರವಿರಲಿ. ಈಗ ಬೇಕಿಂಗ್ ಶೀಟ್ ಅನ್ನು ಓವನ್‌ನಲ್ಲಿಟ್ಟು ಸುಮಾರು 10 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.