ಹೆಲ್ತ್ ಟಿಪ್ಸ್ : ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಯಾವಾಗಲೂ ಬೇಕೇ ಬೇಕು. ಬೇಕರಿಯಿಂದ ನೀವು ಯಾವಾಗಲೂ ಕುರುಕಲು ತಿಂಡಿ ತರೋದಕ್ಕಿಂತ ಮನೆಯಲ್ಲೇ ಏನಾದರೂ ಸಿಂಪಲ್ ಆಗಿ ಟ್ರೈ ಮಾಡಲು ಬಯಸಿದರೆ ನಾವಿಂದು ಹೇಳಿಕೊಡುತ್ತಿರೋ ರೆಸಿಪಿ ಪರ್ಫೆಕ್ಟ್ ಆಗಿದೆ. ಬೆಂಡೆಕಾಯಿಯ ಈ ಕುರುಕಲು ತಿಂಡಿ ಚಹಾದೊಂದಿಗೆ ಸವಿಯಲು ಮಜವೆನಿಸುತ್ತದೆ. ಊಟದೊಂದಿಗೆ ಇದನ್ನು ನೀವು ಸೈಡ್ ಡಿಶ್ ಆಗಿಯೂ ಬಳಸಬಹುದು.
ಬೇಕಾಗುವ ಪದಾರ್ಥಗಳು..
ಬೆಂಡೆಕಾಯಿ – 200 ಗ್ರಾಂ
ಕಡಲೆ ಹಿಟ್ಟು – 2 ಟೀಸ್ಪೂನ್
ಅಕ್ಕಿ ಹಿಟ್ಟು – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನಪುಡಿ – ಅರ್ಧ ಟೀಸ್ಪೂನ್
ಆಮ್ಚೂರ್ ಪುಡಿ – ಕಾಲು ಟೀಸ್ಪೂನ್
ಚಾಟ್ ಮಸಾಲಾ – 1 ಟೀಸ್ಪೂನ್
ಎಣ್ಣೆ – ಹುರಿಯಲು ಬೇಕಾಗುವಷ್ಟು
ಮಾಡುವ ವಿಧಾನ..
- ಮೊದಲಿಗೆ ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಶುಭ್ರ, ಒಣ ಬಟ್ಟೆಯಿಂದ ಒರೆಸಿಕೊಳ್ಳಿ.
- ಬೆಂಡೆಕಾಯಿಯ ಅಂಚುಗಳನ್ನು ಕತ್ತರಿಸಿ, ತೆಳ್ಳಗಿನ ಹಾಗೂ ಉದ್ದವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ.
- ಬಳಿಕ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಕೆಂಪು ಮೆಣಸಿನಪುಡಿ, ಆಮ್ಚೂರ್‌ಪುಡಿಯನ್ನು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಂಡೆಕಾಯಿಗಳನ್ನು ಕುರುಕಲಾಗುವಂತೆ ಹಾಗೂ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.
- ಬಳಿಕ ಅವುಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ.
- ನಂತರ ಅದರ ಮೇಲೆ ಚಾಟ್ ಮಸಾಲಾವನ್ನು ಸಿಂಪಡಿಸಿ.
- ಇದೀಗ ಬೆಂಡೆಕಾಯಿಯ ಕುರುಕಲು ತಿಂಡಿ ಸಿದ್ಧವಾಗಿದ್ದು, ಚಹಾದೊಂದಿಗೆ ಇಲ್ಲವೇ ಊಟದೊಂದಿಗೆ ಸೈಡ್ ಡಿಶ್ ಆಗಿ ಬಡಿಸಿ.