ಎಲಿಜಬೆತ್-II ಅಂತ್ಯಕ್ರಿಯೆ ಹಿನ್ನೆಲೆ ಬ್ರಿಟನ್‍ ಗೆ ತೆರಳಿದ ದ್ರೌಪದಿ ಮುರ್ಮು

ಸೆಪ್ಟೆಂಬರ್ 19 ರಂದು ನಡೆಯಲಿರುವ ಬ್ರಿಟನ್ ರಾಣಿ ಎಲಿಜಬೆತ್-II (Elizabeth II) ಅಂತ್ಯಕ್ರಿಯೆಯಲ್ಲಿ ಭಾಗವ (Indian President Draupadi Murmu) ಇಂಗ್ಲೆಂಡ್ ಗೆ ತೆರಳಿದ್ದಾರೆ.

ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್ ಗೆ ತೆರಳಿದ್ದ ದ್ರೌಪದಿ ಮುರ್ಮು ಇಂದು ಮುಂಜಾನೆ ಲಂಡನ್ ಗೆ ಬಂದಿಳಿದಿದ್ದು, ಭಾರತದ ಪರವಾಗಿ ರಾಜಮನೆತನಕ್ಕೆ ಸಂತಾಪ ಸೂಚಿಸಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ದ್ರೌಪದಿ ಮುರ್ಮು ಲಂಡನ್ ನಲ್ಲಿ ರಾಣಿ ಎಲಿಜಬೆತ್-II ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದೇನೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಇದನ್ನೂ ಓದಿ : – ಇಂದು ಬಾಗೇಪಲ್ಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನ – CPIM ಶಕ್ತಿ ಪ್ರದರ್ಶನಕ್ಕೆ ಸಜ್ಜು

ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಬಳಿಕ ದ್ರೌಪದಿ ಮುರ್ಮು ಕೈಗೊಳ್ಳುತ್ತಿರುವ ಮೊದಲ ವಿದೇಶಿ ಪ್ರವಾಸ ಇದಾಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬರುವ ಎಲ್ಲ ದೇಶಗಳ ಗಣ್ಯರು ಸರ್ಕಾರಿ ವಿಮಾನದ ಬದಲಾಗಿ ಖಾಸಗಿ ವಿಮಾನದಲ್ಲಿ ಬರಲು ಬ್ರಿಟನ್ ಅರಮನೆ ಮನವಿ ಮಾಡಿಕೊಂಡಿತ್ತು. ಹೀಗಾಗಿ ದ್ರೌಪದಿ ಮುರ್ಮು ಅವರು ಖಾಸಗಿ ವಿಮಾನದಲ್ಲಿ ಇಂಗ್ಲೆಂಡ್ಗೆ ತೆರಳಿದ್ದರು.

ಇದನ್ನೂ ಓದಿ : – ಇಂದು ಬಾಗೇಪಲ್ಲಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನ – CPIM ಶಕ್ತಿ ಪ್ರದರ್ಶನಕ್ಕೆ ಸಜ್ಜು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!