ದಕ್ಷಿಣ ಆಫ್ರಿಕಾದಲ್ಲಿ ಇಂಧನದ ಟ್ಯಾಂಕರ್ ಸ್ಫೋಟ – 10 ಜನ ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನ ಬೋಕ್ಸ್ ಬರ್ಗ್ ನಲ್ಲಿ ಬೃಹತ್ ಇಂಧನದ ಟ್ಯಾಂಕರ್ ( TANKER ) ಸ್ಫೋಟಗೊಂಡ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನ ಬೋಕ್ಸ್ ಬರ್ಗ್ ನಲ್ಲಿ ಬೃಹತ್ ಇಂಧನದ ಟ್ಯಾಂಕರ್ ( TANKER ) ಸ್ಫೋಟಗೊಂಡ ಪರಿಣಾಮ 10 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಎಲ್.ಪಿ. ಜಿ ( LPG ) ಯನ್ನು ಸಾಗಿಸುತ್ತಿದ್ದ ಟ್ಯಾಂಕರ್ ಶನಿವಾರ ಬೆಳಿಗ್ಗೆ ಆಸ್ಪತ್ರೆ ಮತ್ತು ಮನೆಗಳ ಸಮೀಪವಿರುವ ಸೇತುವೆಯೊಂದರ ಕೆಳಗೆ ಸ್ಫೋಟಗೊಂಡಿದೆ.

ಬೋಕ್ಸ್ಬರ್ಗ್ ನ ಟಾಂಬೊ ಮೆಮೋರಿಯಲ್ ಆಸ್ಪತ್ರೆ ಬಳಿ ಶನಿವಾರ LPG ಯನ್ನು ಸಾಗಿಸುತ್ತಿದ್ದ ಇಂಧನ ಟ್ಯಾಂಕರ್ ಸ್ಫೋಟಗೊಂಡ ನಂತರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಆಸ್ಪತ್ರೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಸೇತುವೆಯ ಕೆಳಗೆ ಇಂಧನದ ಟ್ಯಾಂಕರ್ ಸಿಲುಕಿಕೊಂಡು, ಸ್ಫೋಟವಾಗಿದೆ ಎನ್ನಲಾಗಿದೆ. ಈ ಸ್ಫೋಟದ ನಂತರ ಆಸ್ಪತ್ರೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಇದನ್ನು ಓದಿ : – ಮುನಿರತ್ನ ವಿರುದ್ಧ ಕಮಿಷನ್ ಆರೋಪ ಪ್ರಕರಣ – ಅರೆಸ್ಟ್ ಆಗಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಜಾಮೀನು

ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವಾಗಲೇ ಎರಡನೇ ಭಾರಿ ಸ್ಫೋಟ ಸಂಭವಿಸಿದೆ. ಇದರಿಂದ ಅಗ್ನಿಶಾಮಕ ವಾಹನದ ಎಂಜಿನ್ ಮತ್ತು ಎರಡು ಮೋಟಾರು ವಾಹನಗಳಿಗೆ ಹಾನಿಯಾಗಿದೆ. ಈ ಘಟನೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಊಹಿಸಲಾಗಿದೆ. ಈಗಾಗಲೇ ಗಾಯಗೊಂಡಿರುವ 19 ಜನರ ಸ್ಥಿತಿ ತೀರಾ ಗಂಭೀರವಾಗಿದೆ. 15 ಗಾಯಾಳುಗಳ ಆರೋಗ್ಯ ಸ್ಥಿರವಾಗಿದ್ದರೂ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ : –  ತೆಲುಗು ಚಿತ್ರರಂಗಕ್ಕೆ ಮತ್ತೊಂದು ಆಘಾತ – ಹಿರಿಯ ನಟ ಚಲಪತಿ ರಾವ್‌ ನಿಧನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!