ರಷ್ಯಾ-ಉಕ್ರೇನ್ ( russia – ukrian ) ಯುದ್ಧವನ್ನು ತೀವ್ರವಾಗಿ ವಿರೋಧಿಸಿದ್ದ ರಷ್ಯಾದ ಸಂಸದ 64 ವರ್ಷದ ಪಾವೆಲ್ ಆಂಟೊನೊವ್ ಭಾರತದ ಒಡಿಶಾದ ಹೋಟೆಲ್ ಒಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Pavel Antov (64), one of russia’s richest politicians, died after falling from a window in a hotel in India.
Russian consul general in Calcutta stated the police see nothing suspicious about Antov’s demise.#StopPutin #StandWithUkraine pic.twitter.com/vvy5OiJk6H
— olexander scherba🇺🇦 (@olex_scherba) December 26, 2022
ಡಿಸೆಂಬರ್ 22 ಮತ್ತು 25ರಂದು, ಇಬ್ಬರು ರಷ್ಯಾದ ಪ್ರವಾಸಿಗರು ಭಾರತದ ಒಡಿಶಾದ ಹೋಟೆಲ್‌ನಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಡಿಸೆಂಬರ್ 21 ರಂದು ನಾಲ್ವರು ರಷ್ಯಾದ ಪ್ರವಾಸಿಗರು ಒಡಿಶಾದ ರಾಯಗಡದಲ್ಲಿರುವ ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ ಗೆ ಭೇಟಿ ನೀಡಿದ್ದರು. ಅವರಲ್ಲಿ ಒಬ್ಬರಾದ ವ್ಲಾಡಿಮಿರ್ ಬುಡಾನೋವ್ ಡಿಸೆಂಬರ್ 22ರಂದು ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬುಡಾನೋವ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಇದನ್ನು ಓದಿ : – ಪ್ರಧಾನಿ ಮೋದಿ ಭೇಟಿಯಾದ ಕೇರಳ ಸಿಎಂ ಪಿಣರಾಯಿ ವಿಜಯನ್
ಡಿಸೆಂಬರ್ 25ರಂದು ಬುಡಾನೋವ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಪಾವೆಲ್ ಆಂಟೋವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ ಶರ್ಮಾ ಖಚಿತಪಡಿಸಿದ್ದಾರೆ. ಆಂಟೊನೊವ್ ಒಡಿಶಾದ ರಾಯಗಡ ಪ್ರದೇಶದಲ್ಲಿ ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅವರು ಹೋಟೆಲ್‌ನ ಮೂರನೇ ಮಹಡಿಯ ಕಿಟಕಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವನ್ನು ರಷ್ಯಾದ ಶ್ರೀಮಂತ ಸಂಸದ ಆಂಟೊನೊವ್ ತೀವ್ರವರಾಗಿ ವಿರೋಧಿಸಿದ್ದರು.
ಇದನ್ನು ಓದಿ : – BREAKING NEWS – ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತ