ಭಾರತದಲ್ಲಿ ಮೇ 29ರಂದು ಭಾರತದಲ್ಲಿ ಮುಂಗಾರು ಪ್ರಾರಂಭವಾಗಿದ್ದರೂ ಮಳೆ ಕೊಂಚ ಕ್ಷೀಣಿಸಿತ್ತು. ಆದರೆ, ಈ ವಾರ ಮಳೆಗಾಲ ತೀವುಗೊಂಡಿದೆ. ಮಂಗಳವಾರದಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮೇಘಾಲಯದ ಚಿರಾಪುಂಜಿ ಮತ್ತು ಮೌಸಿನ್ರಾಮ್ ನಲ್ಲಿ ದಾಖಲೆಯ ಮಳೆಯಾಗುತ್ತಿದೆ. ಮಳೆಯ ಅಬ್ಬರಕ್ಕೆ ರಾಜ್ಯಗಳು ತತ್ತರಿಸಿವೆ.
ಭಾರೀ ಮಳೆ ಮತ್ತು ಭೂಕುಸಿತದಿಂದ ಮಾನ್ಸೂನ್ ಪೀಡಿತ ಈಶಾನ್ಯ ರಾಜ್ಯಗಳಲ್ಲಿ 6 ಮಕ್ಕಳು ಸೇರಿದಂತೆ ಕನಿಷ್ಠ 9 ಜನರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೇಘಾಲಯದಲ್ಲಿ ಅಂದಾಜು ಐದು ವ್ಯಕ್ತಿಗಳು ದುರಂತಕ್ಕೆ ಬಲಿಯಾಗಿದ್ದಾರೆ. ಶಿಲ್ಲಾಂಗ್ನ ನಾಂಗ್ಸ್ಸಂಗ್ ಸರ್ಕಲ್ನ ಲೈಟ್ನಾರಮ್ನಲ್ಲಿ ಮನ ಬಿದ್ದು ನಾಲ್ವರು ಅಪ್ರಾಪ್ತರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ : – ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್ – ಭಾರತ-ದಕ್ಷಿಣ ಆಫ್ರಿಕಾ ಟಿ20 ಬೆಂಗಳೂರು ಪಂದ್ಯ ಮಧ್ಯರಾತ್ರಿವರೆಗೂ ಮೆಟ್ರೋ ರೈಲು ಕಾರ್ಯಾಚರಣೆ!
ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯ ಜಶಿಯಾ ಗ್ರಾಮದಲ್ಲಿ ಮನೆ ಕುಸಿದು 25 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೇಘಾಲಯ ಮತ್ತು ಅಸ್ಸಾಂನಲ್ಲಿ ಪುವಾಹದ ಅಬ್ಬರಕ್ಕೆ ಒಟ್ಟು 16 ಜನ ಸಾವನ್ನಪ್ಪಿದ್ದಾರೆ.
ಅಸ್ಸಾಂನ ಗೋಲ್ಲಾರಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಸಹೋದರರು, ಇಬ್ಬರೂ ಅಪ್ರಾಪ್ತ ವಯಸ್ಕರು ಸಾವನ್ನಪ್ಪಿದ್ದಾರ, ಬುಧವಾರ ಎಡಬಿಡದೆ ಸುರಿಯುತ್ತಿರುವ ಮಳೆಯ ನಡುವ ಮರವೊಂದು ಬಿದ್ದು ಆಟೋ ರಿಕ್ಷಾ ಚಾಲಕ ಮೃತಪಟ್ಟಿದ್ಯಾನ, ಈಶಾನ್ಯ ರಾಜ್ಯಗಳಲ್ಲಿ ಈ ವರ್ಷ ಪುನಾಹ ಮತ್ತು ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.
ಅಗತ್ಯ ಮೂಲಸೌಕರ್ಯಗಳ ಮೇಲೆ ಮಳೆ ಭಾರೀ ಪರಿಣಾಮ ಬೀರುತ್ತದೆ, ತ್ರಿಪುರಾ, ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನ ದಕ್ಷಿಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗವು ಒಂದು ತಿಂಗಳಿಗೂ ಹೆಚ್ಚು ಕಾಲ ಸಂಪರ್ಕ ಕಡಿತಗೊಂಡಿದೆ. ಜೂನ್ 1ರಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಪುವಾಹ ಪರಿಸ್ಥಿತಿ ಹದಗೆಟ್ಟಿದ್ರು, ಪುಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ ರಾಜ್ಯದಾದ್ಯಂತ ಹಲವು ಸ್ಥಳಗಳಲ್ಲಿ ನಿರಂತರ ಮಳೆಯಿಂದ ಭೂಕುಸಿತ ಉಂಟಾಗಿದ್ದು, 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 25 ಜಿಲ್ಲೆಗಳಲ್ಲಿ ಕನಿಷ, ಲಕ್ಷ ಜನರು ಪುವಾಹದಿಂದ ಪ್ರಭಾವಿತರಾಗಿದ್ದಾರೆ. ಬ್ರಹ್ಮಪುತ್ರ ಮತ್ತು ಗೌರಂಗಾ ನದಿಗಳಲ್ಲಿ ನೀರಿನ ಮಟ್ಟ ಹಲವು ಪುದೇಶಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : – ಅಗ್ನಿಪಥ್ ಯೋಜನೆ ವಿರುದ್ಧ ಹಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ – ಇಂದು ಕೂಡ ರೈಲುಗಳಿಗೆ ಬೆಂಕಿ