CANCER – ಕರುಳಿನ ಕ್ಯಾನ್ಸರ್ – ಉದ್ಯಮಿ ಕಿರಣ್ ಮಜುಮ್ದಾರ್ ಶಾ ಪತಿ ಜಾನ್ ಶಾ ನಿಧನ

ಪ್ರಖ್ಯಾತ ಉದ್ಯಮಿ ಕಿರಣ್ ಮಜುಮ್ದಾರ್ ಶಾ (Kiran Mazumdar Shaw ) ಪತಿ ಜಾನ್ ಶಾ ಅವರು ನಿಧನರಾಗಿದ್ದಾರೆ.

ಪ್ರಖ್ಯಾತ ಉದ್ಯಮಿ ಕಿರಣ್ ಮಜುಮ್ದಾರ್ ಶಾ (Kiran Mazumdar Shaw ) ಪತಿ ಜಾನ್ ಶಾ ಅವರು ನಿಧನರಾಗಿದ್ದಾರೆ. ಕರುಳಿನ ಕ್ಯಾನ್ಸರ್ನಿಂದ ಜಾನ್ ಶಾ ಅವರು ಬಳಸುತ್ತಿದ್ದರು. ಕಳೆದ ಕೆಲ ದಿನಗಳಿಂದ ಜಾನ್ ಶಾ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಾನ್ ಬಯೋಕಾನ್ (Biocon) ಕಂಪನಿಯ ಸಲಹಾ ಸಮಿತಿಯ ಜವಾಬ್ದಾರಿ ನಿಭಾಯಿಸುತ್ತಿದ್ದರು.

ಮಧುರಾ ಕೋಟ್ಸ್ ಲಿಮಿಟೆಡ್ನ ಮಾಜಿ ಅಧ್ಯಕ್ಷರಾಗಿದ್ದರು. ಜೊತೆಗೆ ಕೋಟ್ಸ್ ವಿಯೆಲ್ಲಾ ಗ್ರೂಪ್ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಬಯೋಕಾನ್ ಸಂಸ್ಥೆಯ ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ ಜಾನ್ ಶಾ ಹಲವಾರು ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿದ್ದರು. 1999 ರಿಂದ ಅವರು ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ : – RSS ಬ್ಯಾನ್ ಮಾಡಿ ಅನ್ನುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿದೆ…? – ಸಿ.ಎಂ. ಇಬ್ರಾಹಿಂ ಪ್ರಶ್ನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!