ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಡಿಮೆಯಾಯ್ತು ಅಂತಾ ನೆಮ್ಮದಿಯ ಊಸಿರು ಬಿಟ್ಟು ಎಲ್ಲ ಸಹಜ ಸ್ಥಿತಿಗೆ ಬರ್ತಿದ್ದಂತೆ ಚೀನಾದಿಂದ ಮತ್ತೊಂದು ತಲೆ ಬಿಸಿ ಶುರುವಾಗಿದೆ. ಸದ್ಯ ಚೀನಾದಲ್ಲಿ ಆತಂಕ ಸೃಷ್ಟಿಸಿರುವ ಮಕ್ಕಳಲ್ಲಿನ ಹೊಸ ನ್ಯುಮೋನಿಯಾ ತಳಿ ರಾಜ್ಯದಲ್ಲಿ ಭಯ ಹುಟ್ಟಿಸಿದೆ.
ಇಷ್ಟು ದಿನ ಕೊರೊನ ಆಯ್ತು , ಬ್ಲಾಕ್ ಫಂಗಸ್ ಆಯ್ತು, ಡೆಂಗ್ಯೂ, ಬ್ರಾಂಕೈಟಿಸ್ ಆಯ್ತು ಈಗ ನ್ಯುಮೋನಿಯಾ ಆತಂಕ ಶುರುವಾಗಿದೆ. ವೈರಸ್ ಗಳ ಹಬ್ಬ ಚೀನಾದಲ್ಲಿ ಈಗ ಎದಿರುವ ಹೊಸ ತಳಿ ನ್ಯುಮೋನಿಯಾ ಮಕ್ಕಳಿಗೆ ಹೆಚ್ಚು ಅಪಾಯ ತಂದೊಡಿದ್ದೆ ಮಕ್ಕಳ ಉಸಿರಾಟದ ಮೇಲೆ ಸಾಕಷ್ಟು ಸಮಸ್ಯೆ ತಂದೊಡಿದೆ. ಹೀಗಾಗಿ ಅಲರ್ಟ್ ಆಗಿರುವ ಕೇಂದ್ರ ಆರೋಗ್ಯ ಇಲಾಖೆ ರಾಜ್ಯ ಆರೋಗ್ಯ ಇಲಾಖೆಗಳಿಗೆ ಮುನ್ನೇಚ್ಚರಿಕೆ ವಹಿಸಲು ಸೂಚಿಸಿದೆ.
ಸದ್ಯ ಚೀನಾದಲ್ಲಿನ ಪ್ಲೂ ಮಕ್ಕಳಿಗೆ ಹೆಚ್ಚು ಸಮಸ್ಯ ತಂದಿದೆ ಹೀಗಾಗಿ ವೈದ್ಯರು ಮಕ್ಕಳೇ ಈ ಫ್ಲೂಗೆ ಟಾರ್ಗಟ್ ಅಂತಿದ್ದಾರೆ ಹೀಗಾಗಿ ಮಕ್ಕಳ ಉಸಿರಾಟದ ಸಮಸ್ಯೆ ವರದಿ ಪಡೆಯಲು ತಾಂತ್ರಿಕ ಸಲಹಾ ಸಮಿತಿ ಮುಂದಾಗಿದೆ. ಮಕ್ಕಳ ಆರೋಗ್ಯ ಬಗ್ಗೆ ಆರೋಗ್ಯ ಇಲಾಖೆ ಮುನ್ನೇಚ್ಚರಿಕೆ ವಹಿಸಿದೆ. ಇನ್ನು ಚೀನಾದಲ್ಲಿ ಶುರುವಾಗಿರುವ ವೈರಲ್ ಇನ್ಫೆಕ್ಷನ್ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತಿದೆ ಹೀಗಾಗಿ ಎಚ್ಚರ ವಹಿಸುವಂತೆ WHO ಹೇಳಿದೆ.
ಅದರಲ್ಲೂ ಪುಟಾಣಿ ಮಕ್ಕಳು , ವಯೋವೃದ್ಧರು, ಕೋಮಾರ್ಬಿಟಿಸ್ ರೋಗಿಗಳು ಇದಕ್ಕೆ ಹೆಚ್ಚು ಅಪಾಯಕ್ಕೆ ತುತ್ತಾಗುತ್ತಾರೆ ಅಂತಾ ಎಚ್ಚರಿಕೆ ಹಿನ್ನಲೆ ಆರೋಗ್ಯ ಇಲಾಖೆ ಹೈ ಅಲರ್ಟ್ ಗೆ ಮುಂದಾಗಿದೆ.. ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ SARI ILI ಜ್ವರ ನೆಗಡಿ ಕೆಮ್ಮು ಪ್ರಕರಣಗಳ ವರದಿ ಪಡೆಯಲು ಮುಂದಾಗಿದೆ.. ರಾಜ್ಯದಲ್ಲಿ ಮಕ್ಕಳ ಸ್ಥಿತಿ ಹೇಗಿದೆ ನಮ್ಮಲ್ಲಿ ಏನಾದ್ರೂ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ತೀವ್ರ ಜ್ವರ ಹಾಗೂ ಕೆಮ್ಮು ನಗಡಿಯ ಸಮಸ್ಯೆ ಮಕ್ಕಳಲ್ಲಿ ಕಂಡು ಬರ್ತಿದೆಯಾ,? ಬರ್ತಾ ಇದ್ರೆ ಎಷ್ಟು ಕೇಸ್ ಪತ್ತೆಯಾಗ್ತೀವೆ.. ಯಾವ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರ್ತಿದೆ ಅಂತಾ ವರದಿ ಪಡೆಯಲು ತಾಂತ್ರಿಕ ಸಲಹಾ ಸಮಿತಿ ಮುಂದಾಗಿದೆ.. ಜೊತೆಗೆ ರಾಜ್ಯದಲ್ಲಿ ಮಕ್ಕಳು ಕೋಮಾರ್ಬಿಸಿಟ್ ಉಸಿರಾಟದ ಸಮಸ್ಯೆಯ ಪ್ರಕರಣಗಳನ್ನ ಪತೆ ಹಚ್ಚಲು ಹಾಗೂ ಟೆಸ್ಟಿಂಗ್ ಹಾಗೂ ಟ್ರ್ಯಾಕ್ ಮಾಡಲು ಮುಂದಾಗಿದೆ.
ಇನ್ನು ಚೀನಾದಲ್ಲಿ ಶುರುವಾಗಿರುವ ನಿಗೂಢ ಸೋಂಕಿನ ಆರ್ಭಟ ಭಾರತಕ್ಕೂ ವ್ಯಾಪಿಸವ ಆತಂಕ ಇದೆ ಈ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿದೆ. ಕೋವಿಡ್ ಮಾದರಿಯಲ್ಲೇ ಹೊಸ ಸೋಂಕು ಎದುರಿಸಲು ಸಿದ್ದತೆ ಕೈಗೊಳ್ಳುವಂತೆ ಹೇಳಿದೆ. ಇತ್ತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಉಸಿರಾಟ ಸಂಬಂಧಿ ಹಾಗೂ ನ್ಯುಮೋನಿಯಾ ಮಾದರಿ ರೋಗ ಲಕ್ಷಣಗಳು ಇರುವ ರೋಗಿಗಳ ಮೇಲೆ ನಿಗಾ ವಹಿಸಿವೆ. ಅದರಲ್ಲೂ ಶ್ವಾಸಕೋಶ ಸೋಂಕು ಹಾಗೂ ನ್ಯುಮೋನಿಯಾ ಲಕ್ಷಣಗಳು ಕಂಡು ಬರುವ ರೋಗಿಗಳ ವಿಚಾರದಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ನಿಗಾ ವಹಿಸಿದೆ.
ಒಟ್ನಲ್ಲಿ ಚೀನಾದಲ್ಲಿನ ಹೊಸ ತಳಿ ಭಾರತಕ್ಕು ಆಪಾಯ ತರುವ ಸಾಧ್ಯತೆ ಎದುರಗಿದೆ ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಸಿದ್ಧತೆ ಶುರು ಮಾಡಿದ್ದ ಮುನ್ನೇಚ್ಚರಿಕೆ ಮುಂದಾಗಿದೆ ಅದೇ ಏನೆ ಇದ್ರೂ ಜನರು ಕೊಂಚ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ
ವರದಿ : ವರ್ಷಿತ ತಾಕೇರಿ ರಾಜ್ ನ್ಯೂಸ್ ಬೆಂಗಳೂರು