ಹೆಚ್ಚಿನ ಮಹಿಳೆಯರು ಮೂಳೆ ನೋವಿನ ಅಪಾಯವನ್ನು ಹೊಂದಿರುತ್ತಾರೆ. 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಮೂಳೆ ಮುರಿತವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅತಿಯಾಗಿ ವಾಯು ಮಾಲಿನ್ಯಕ್ಕೆ ಒಗ್ಗಿಕೊಳ್ಳುವುದು ಮೂಳೆಗಳ ನಷ್ಟಕ್ಕೆ ಕಾರಣವಾಗಬಹುದು. ಸಂಶೋಧನೆಯ ಪ್ರಕಾರ 1.6 ಲಕ್ಷಕ್ಕೂ ಹೆಚ್ಚು ಋತುಬಂಧಕ್ಕೊಳಗಾದ ಮಹಿಳೆಯರ ಆರೋಗ್ಯದ ಮೇಲೆ ನಡೆಸಿದ ಸಂಶೋಧನೆಯಿಂಧ ಅತಿಯಾಗಿ ವಾಯು ಮಾಲಿನ್ಯಕ್ಕೆ ಒಗ್ಗಿಕೊಳ್ಳುವುದು ಮೂಳೆಗಳ ಹಾನಿಗೆ ಕಾರಣವಾಗಬಹುದು.
ಅಧ್ಯಯನದ ಪ್ರಕಾರ, ನೈಟ್ರಸ್ ಆಕ್ಸೈಡ್‍ಗಳಂತಹ ವಾಯು ಮಾಲಿನ್ಯಕಾರಕಗಳ ಹೆಚ್ಚಿದ ಮಟ್ಟಗಳು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಮೂಳೆ ಹಾನಿಗೆ ಕಾರಣವಾಗುತ್ತದೆ ಎಂದು ಹೇಳಾಲಾಗಿದೆ.
ವಿಜ್ಞಾನಿಗಳ ಪ್ರಕಾರ, ನೈಟ್ರಸ್ ಆಕ್ಸೈಡ್‍ಗಳು ವಯಸ್ಸಾಗುತ್ತಾ ಹೋದಂತೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಬೆನ್ನು ನೋವಿಗಿಂತ ಎರಡು ಪಟ್ಟು ಹಾನಿಯುಂಟುಮಾಡುತ್ತದೆ. ಇ-ಕ್ಲಿನಿಕಲ್ ಮೆಡಿಸಿನ್ ಜರ್ನಲ್‍ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಯು ವಾಯುಮಾಲಿನ್ಯ ಮತ್ತು ಮೂಳೆ ಖನಿಜ ಸಾಂದ್ರತೆಯ ನಡುವಿನ ಸಂಪರ್ಕವನ್ನು ನಿರ್ದಿಷ್ಟವಾಗಿ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಮತ್ತು ಮೂಳೆ ಫಲಿತಾಂಶಗಳ ಮೇಲೆ ವಾಯು ಮಾಲಿನ್ಯದ ಮಿಶ್ರಣಗಳ ಪರಿಣಾಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.