Health

ಹಾಲು ಕುಡಿಯುವುದರಿಂದ ಹೃದಯ ಸಂಬಂಧಿ ಕಾಯಿಲೆ ಬರುತ್ತಾ ? ಎಂಬ ಪ್ರಶ್ನೆ ನಿಮಗೆ ಇದಿಯಾ…

ಹಾಲು ಎಲ್ಲರಿಗೂ ಇಷ್ಟ, ಕಾಫಿ, ಟೀ, ಕಷಾಯ ಏನೇ ಇರಲಿ ಹಾಲಿಲ್ಲದೇ ಆಗುತ್ತಾ, ಅಷ್ಟೇ ಅಲ್ಲದೆ ಮಕ್ಕಳ ಬೆಳವಣಿಗೆಗಂತೂ ಹಾಲು ಮುಖ್ಯವಾಗಿದೆ. ಪ್ರತಿ ದಿನವೂ ಎರಡು ಹೊತ್ತಾದರೂ ಹಾರ್ಲಿಕ್ಸ್, ಬೋನ್ರ್ವೀಟಾ, ಬೂಸ್ಟ್ ಹೀಗೆ ಯಾವುದೇ ಒಂದು ಪುಡಿ ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ಕೊಡುತ್ತಿವಿ. ಆದರೆ ಈ ಹಾಲಿನಿಂದ ಹೃದ್ರೋಗದ ಅಪಾಯವಿದೆ ಎಂದು ವಿಜ್ಞಾನಿಯೊಬ್ಬರು ಹೇಳಿರುವುದು ಇದೀಗ ಜನರಲ್ಲಿ ಆತಂಕಕ್ಕೆ ಗುರಿಯಾಗಿದೆ.

ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ. ಬಹುತೇಕ ತಾಯಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೊದಲು ಒಂದು ಲೋಟ ಹಾಲು ನೀಡಿ ಕಳುಹಿಸುತ್ತಾರೆ. ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಪಡೆಯಬಹುದು ಎಂದು ನಂಬಲಾಗಿದೆ. ಆದರೆ ಆರೋಗ್ಯವಾಗಿರಲು ನೀವು ಕುಡಿಯುವ ಹಾಲು ಅಪಾಯಕಾರಿ ಕಾಯಿಲೆಗೆ ಕಾರಣವಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಹಾಲು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಹಾಲು ಸೇರಿದಂತೆ ಎಲ್ಲಾ ಡೈರಿ ಉತ್ಪನ್ನಗಳನ್ನು ಸೇವಿಸುವುದು ಹೃದ್ರೋಗಕ್ಕೆ ಕಾರಣವಾಗಬಹುದು. ಹೃದ್ರೋಗದಿಂದ ದೂರವಿರಲು ಡೈರಿ ಉತ್ಪನ್ನಗಳನ್ನು ತ್ಯಜಿಸಿ ಸಸ್ಯಾಹಾರಿಗಳಾಗುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.

ಸಂಶೋಧನೆಯ ಪ್ರಕಾರ, ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳು ಸಸ್ಯಾಹಾರಿಗಳಲ್ಲಿ ಬಹಳ ಕಡಿಮೆ ಎಂಬುದು ಕಂಡುಬಂದಿದೆ. ಅಷ್ಟೇ ಅಲ್ಲ, ಈ ಜನರಲ್ಲಿ ಹೃದ್ರೋಗದ ಅಪಾಯವೂ ತುಂಬಾ ಕಡಿಮೆ ಇದೆ. ಹೃದಯ ಮತ್ತು ರಕ್ತಪರಿಚಲನಾ ಅಸ್ವಸ್ಥತೆಗಳನ್ನು ತಪ್ಪಿಸಲು ಡೈರಿ ಉತ್ಪನ್ನಗಳನ್ನು ಸೇವಿಸುವುದು ಅನಿವಾರ್ಯವಲ್ಲ ಎಂದು ತಜ್ಞರು ಹೇಳಿದರು. ಅಧಿಕ ಕೊಬ್ಬಿನಂಶವಿರುವ ಡೈರಿ ಉತ್ಪನ್ನಗಳನ್ನು ಬಳಸದಂತೆ ಸಲಹೆ ನೀಡಿದರು. ಕೊಬ್ಬಿನಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳು ಉತ್ತಮವಾಗಿವೆ. ಏಕೆಂದರೆ ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ. ಹಾರ್ಟ್ ಫೌಂಡೇಶನ್ನ ವರದಿಯು ಹೃದ್ರೋಗವು ಹಾಲಿಗೆ ಸಂಬಂಧಿಸಿದೆ ಎಂಬ ಕಲ್ಪನೆಯನ್ನು ತಿರಸ್ಕರಿಸಿದೆ ಮತ್ತು ಹೃದಯವನ್ನು ಆರೋಗ್ಯಕರವಾಗಿಡಲು ಡೈರಿ ಹಾಲನ್ನು ಸೇವಿಸಬಹುದು ಎಂದು ಹೇಳಾಲಾಗಿದೆ. ಜನರು ಕೊಬ್ಬಿನ ಉತ್ಪನ್ನಗಳನ್ನು ಸೇವಿಸಬಹುದು. ಈಗಾಗಲೇ ಯಾವುದೇ ಹೃದ್ರೋಗ ಅಥವಾ ಅಧಿಕ ಕೊಲೆಸ್ಟ್ರಾಲ್‍ನಿಂದ ಬಳಲುತ್ತಿರುವ ಜನರಿಗೆ ಕಡಿಮೆ ಕೊಬ್ಬಿರುವ ಹಾಲಿನ ಬಳಕೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!