ವ್ಯಾಯಾಮದ ಮಾಡುವಾಗ ಹೆಚ್ಚಿದ ಶಾಖ, ದೇಹದ ಭಾಗಗಳಿಗೆ ರಕ್ತ ಪೂರೈಕೆಯ ಹೆಚ್ಚಳ ಅತಿಯಾದಾಗ ಮತ್ತು ಹಲವಾರು ಚಟುವಟಿಕೆಗಳಿಂದ ತುರಿಕೆ ಉಂಟಾಗಬಹುದು. ಬೆವರು, ಅಥವಾ ವ್ಯಾಯಾಮದ ಮೊದಲು ನೀವು ಸೇವಿಸುವದ ಆಹಾರ, ಬಳಸುವ ಶವರ್ ಜೆಲ್ ಅಥವಾ ಸೋಪ್ ಕೂಡ ಕಾರಣವಾಗಬಹುದು. ಎಂದು ನರವಿಜ್ಞಾನಿ ಡಾ|| ಸುಧೀರ್ ಕುಮಾರ್ ಈ ತುರಿಕೆ ಪ್ರಕರಣದ ಬಗ್ಗೆ ತಿಳಿಸಿದ್ದಾರೆ.
ವ್ಯಾಯಾಮದ ನಂತರ ಕೆಲವರು ತೀವ್ರವಾದ ತುರಿಕೆಯನ್ನು ಅನುಭವಿಸುತ್ತಾರೆ. ಏಕೆಂದರೆ, ಬೆವರು ಅಥವಾ ಧೂಳು ಇವುಗಳಿಂದ ತುರಿಕೆವು ವ್ಯಾಯಾಮದ ಸಮಯದಲ್ಲಿ ಬರುತ್ತದೆ. ಅದು ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುತ್ತದೆ. ತುರಿಕೆವು 60-90 ನಿಮಿಷಗಳವರೆಗೆ ಇರುತ್ತದೆ ಮತ್ತು ತಾನಾಗಿಯೇ ಪರಿಹರಿಸುತ್ತದೆ ಎಂದು ತಿಳಿದುಬಂದಿದೆ. ರೋಗನಿರ್ಣಯವನ್ನು ಅಂತಿಮವಾಗಿ “ವ್ಯಾಯಾಮ-ಪ್ರೇರಿತ ಉರ್ಟೇರಿಯಾ” ಎಂದು ದೃಢಪಡಿಸಲಾಗಿದೆ. ವ್ಯಾಯಾಮದಿಂದ ಉಂಟಾಗುವ ಉರ್ಟೇರಿಯಾವು ಒಂದು ಅಸಾಮಾನ್ಯ ಸ್ಥಿತಿಯಾಗಿದೆ.
ವ್ಯಾಯಾಮ-ಪ್ರೇರಿತ ಉರ್ಟೇರಿಯಾ (ತುರಿಕೆ) ಎಂದರೇನು?
ವ್ಯಾಯಾಮ-ಪ್ರೇರಿತ ಉರ್ಟೇರಿಯಾವು ದೈಹಿಕ ಚಟುವಟಿಕೆಯ ಸಮಯದಲ್ಲಿ ಅಥವಾ ನಂತರ ಜನರು ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡುವ ಸ್ಥಿತಿಯಾಗಿದೆ .ಇದು ಚರ್ಮದ ಮೇಲೆ ದೊಡ್ಡದಾದ, ಬೆಳೆದ ಉಬ್ಬುಗಳಂತೆ ಕಾಣಿಸಬಹುದು ಮತ್ತು ದೇಹದ ಯಾವುದೇ ಭಾಗದಲ್ಲಿ ಸಂಭವಿಸಬಹುದು. ಅವು ಕೆಂಪು ಕಲೆಗಳು, ಮಚ್ಚೆಗಳು ಅಥವಾ ಗುಳ್ಳೆಗಳಂತೆ ಕಾಣಿಸಬಹುದು.
ಉರ್ಟೇರಿಯಾದ (ತುರಿಕೆ) ಸಾಮಾನ್ಯ ಲಕ್ಷಣಗಳು:
ಚರ್ಮದ ಮೇಲೆ ತುರಿಕೆ, ಚರ್ಮದ ಮೇಲೆ ಕೆಂಪಾಗುವುದು, ಉಸಿರಾಟದಲ್ಲಿ ತೊಂದರೆ ಅಥವಾ ಉಸಿರುಗಟ್ಟಿಸುವ ಭಾವನೆ, ಹೊಟ್ಟೆ ಸೆಳೆತ, ಮುಖ, ನಾಲಿಗೆ ಮತ್ತು ಕೈಗಳಲ್ಲಿ ಊತ, ತಲೆನೋವು, ಇಂತಹ ರೋಗಲಕ್ಷಣಗಳನ್ನು ನೀವು ಗಮನಿಸಿದರೆ ತಕ್ಷಣವೇ ವ್ಯಾಯಾಮವನ್ನು ನಿಲ್ಲಿಸಿ ಮತ್ತು 5 ರಿಂದ 10 ನಿಮಿಷಗಳ ನಂತರ ರೋಗಲಕ್ಷಣಗಳು ಕಣ್ಮರೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.