ಹೆಲ್ತ್ ಟಿಪ್ಸ್ : ಯಾರಿಗೆ ತಾನೆ ಚೆನ್ನಾಗಿ ಕಾಣಬೇಕೆಂಬ ಆಸೆ ಇರೋದಿಲ್ಲ ಹೇಳಿ… ಇತರರಿಗೆ ನಿಮ್ಮ ಮುಖವೂ ಸುಂದರ ಮತ್ತು ಆಕರ್ಷಕವಾಗಿ ಕಾಣುವುದಕ್ಕೆ ಕೆಂಪಾದ ತುಟಿಗಳು ಪ್ರಮುಖ ಆಕರ್ಷಣೆಯಾಗಿದೆ. ತುಟಿಗಳ ಬಣ್ಣವೇ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚಿನ ಜನರ ತುಟಿಗಳು ಕಪ್ಪಾಗಿರುತ್ತವೆ. ಕಪ್ಪು ತುಟಿಗಳು ಅಷ್ಟು ಸುಂದರವಾಗಿ ಕಾಣುವುದಿಲ್ಲ. ಅಂತಹ ಜನರು ತುಟಿಗಳನ್ನು ಕೆಂಪಾಗಿಸಲು ಅನೇಕ ಸಲಹೆಗಳನ್ನು ಅನುಸರಿಸುತ್ತಾರೆ. ಸಿಗರೇಟು ಸೇದುವುದು, ಸಾಕಷ್ಟು ನೀರು ಕುಡಿಯದಿರುವುದು ಮುಂತಾದ ಕೆಲವು ಕಾರಣಗಳು ತುಟಿಗಳು ಕಪ್ಪು ಬಣ್ಣಕ್ಕೆ ತಿರುಗಲು ಕಾರಣವಾಗಬಹುದು. ಈಗ ಕಪ್ಪು ತುಟಿಗಳನ್ನು ಕೆಂಪು ಮತ್ತು ಸುಂದರವಾಗಿ ಮಾಡುವುದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ..
ಸಕ್ಕರೆ ಸ್ಕ್ರಬ್
ಕಪ್ಪು ತುಟಿಗಳನ್ನು ಕೆಂಪು ಬಣ್ಣಕ್ಕೆ ತಿರುಗಿಸಲು ಸಕ್ಕರೆ ಸ್ಕ್ರಬ್ ಸಹ ತುಂಬಾ ಉಪಯುಕ್ತವಾಗಿದೆ. ಇದಕ್ಕಾಗಿ, ಸಕ್ಕರೆಯಲ್ಲಿ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಸ್ವಲ್ಪ ತೆಗೆದುಕೊಂಡು ತುಟಿಗಳಿಗೆ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆಯಿರಿ. ಈ ಸಕ್ಕರೆ ಸ್ಕ್ರಬ್ ತುಟಿಗಳ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಆಗ ನಿಮ್ಮ ತುಟಿಗಳು ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸ್ಕ್ರಬ್ ಅನ್ನು ವಾರಕ್ಕೆ ಎರಡು ಬಾರಿ ಮಾಡಬೇಕು.
ನಿಂಬೆ ರಸ
ಕಪ್ಪು ತುಟಿಗಳನ್ನು ಕೆಂಪಾಗಿಸಲು ನಿಂಬೆ ರಸವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ತುಟಿಗಳ ಮೇಲಿನ ನಿಂಬೆ ರಸವು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕಪ್ಪು ಬಣ್ಣವನ್ನು ತೆಗೆದುಹಾಕುತ್ತದೆ. ಜೇನುತುಪ್ಪದಲ್ಲಿ ನಿಂಬೆ ರಸವನ್ನು ಬೆರೆಸಿ ತುಟಿಗಳಿಗೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ವಾರದಲ್ಲಿ 3-4 ಬಾರಿ ಹೀಗೆ ಮಾಡಿದರೆ ತುಟಿಗಳ ಬಣ್ಣ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.
ಸೌತೆಕಾಯಿ ರಸ
ತುಟಿಗಳು ನೈಸರ್ಗಿಕವಾಗಿ ಗುಲಾಬಿ ಬಣ್ಣಕ್ಕೆ ತಿರುಗಲು, ಕಡಲೆ ಹಿಟ್ಟಿನಲ್ಲಿ ಜೇನುತುಪ್ಪ ಬೆರೆಸಿದ ಸೌತೆಕಾಯಿ ರಸವನ್ನು ಹಚ್ಚಿ. ಈ ಪೇಸ್ಟ್ ಅನ್ನು ತುಟಿಗಳ ಮೇಲೆ 20 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ಮಸಾಜ್ ಮಾಡಿ ಮತ್ತು ತೊಳೆಯಿರಿ