ಎಲ್ಲರೂ ಸಹಜವಾಗಿ ಬೆಳಗಿನ ಕಾಫಿಯನ್ನು ಖಂಡಿತವಾಗಿ ಇಷ್ಟ ಪಟ್ಟೆ ಪಡುತ್ತಾರೆ. ಕಾಫಿ ಅಥವಾ ಚಹಾದಿಂದ ನಿಮ್ಮ ದಿನವನ್ನು ಪಾರಂಭವಾದರೆ… ಇಡೀ ದಿನವು ತುಂಬಾ ಚೆನ್ನಾಗಿರುತ್ತದೆ. ಆದರೆ ಕಾಫಿಯಲ್ಲಿನ ಕೆಫೀನ್ ನಿಮ್ಮ ಕರುಳಿನ ಆರೋಗ್ಯವನ್ನು ಕೆಡಿಸುತ್ತದೆ. ಜೊತೆಗೆ ಹೆಚ್ಚು ಹಾರ್ಮೋನ್ ಅಸಮತೋಲನ, ಉಬ್ಬುವುದು ಮತ್ತು ಮಲಬದ್ಧತೆ ಸಮಸ್ಯೆಗಳಿಗೆ ಕಾರಣವಾಗುತ್ತದೆ” ಎಂದು ತಜ್ಞರು ತಿಳಿಸಿದ್ದಾರೆ.
ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುವಂತೆ ತಜ್ಞರು ಮನೆಯಲ್ಲಿ ಸಿಂಪಲ್ ಆಗಿ ಮನೆಮದ್ದಿನ ಸಲಹೆ ನೀಡಿದ್ದಾರೆ. ಅದು ಏನೆಂದರೆ, ಕಾಫಿಯಿಂದ ಮುಕ್ತವಾಗಿರುವ ಚಹಾದ ಪಾಕ ವಿಧಾನ ಇಲ್ಲಿದೆ. ಅವುಗಳು;
- 1 ಲೋಟ ನೀರು (300 ಮಿಲಿ)
- 15 ಕರಿಬೇವಿನ ಎಲೆ
- 15 ಪುದೀನಾ ಎಲೆಗಳು
- 1 ಚಮಚ ಸೋಂಪು
- 2 ಚಮಚ ಕೊತ್ತಂಬರಿ
ಈ ಮೇಲಿನ ಎಲ್ಲಾ ಪದಾರ್ಥಗಳನ್ನು ಮಧ್ಯಮ ಉರಿಯಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ನಂತರ ಸೋಸಿಕೊಳ್ಳಿ. ಈ ಚಹಾವನ್ನು ನೀವು ಕುಡಿಯುವ ಟೀ, ಕಾಫಿ ಪರ್ಯಾಯವಾಗಿ ಕುಡಿಯಿರಿ. ಈ ರೀತಿ ಮಾಡುವುದರಿಂದ ಆಸಿಡಿಟಿ, ಮೈಗ್ರೇನ್, ವಾಕರಿಕೆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.