ಮೈಗ್ರೇನ್ ಸಾಕಷ್ಟು ಜನ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಕೆಲವು ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಮೈಗ್ರೇನ್ ವಿಪರೀತವಾಗಿರುತ್ತದೆ. ಮಹಿಳೆಯರಲ್ಲಿ ಕಾಡುವ ಮೈಗ್ರೇನ್ಗೆ ಅನೇಕ ಕಾರಣಗಳಿರುತ್ತವೆ. ಅದರಲ್ಲಿ ಒಂದು ಈಸ್ಟ್ರೊಜೆನ್ ಹಾರ್ಮೊನ್ ಮಹಿಳೆಯರ ಜರಾಯು ಮತ್ತು ಅಂಡಾಶಯದಲ್ಲಿ ಉತ್ಪತ್ತಿ ಆಗುತ್ತದೆ. ಈ ಹಾರ್ಮೋನ್ಗಳಲ್ಲಿ ಉಂಟಾಗುವ ವ್ಯತ್ಯಯದಿಂದಾಗಿ ಮಹಿಳೆಯರು ಮೈಗ್ರೇನ್ ಸಮಸ್ಯೆಗಳನ್ನು ಎದುರಿಸುತ್ತಾರೆ.
ಈಸ್ಟ್ರೊಜೆನ್ ಹಾರ್ಮೋನ್:
ಈಸ್ಟ್ರೊಜೆನ್ ಹಾರ್ಮೊನ್ ಮಹಿಳೆಯರ ಜರಾಯು ಮತ್ತು ಅಂಡಾಶಯದಲ್ಲಿ ಉತ್ಪತ್ತಿ ಆಗುತ್ತದೆ. ಈಸ್ಟ್ರೊಜೆನ್ನ ಪ್ರಮುಖ ರೂಪವೆಂದರೆ ಸ್ತ್ರೀ ದೇಹದಿಂದ ಉತ್ಪತ್ತಿಯಾಗುವ ಎಸ್ಟ್ರಾಡಿಯೋಲ್. ಇದನ್ನು ಮಗುವಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಹಾರ್ಮೋನ್ ಎಂದು ಕರೆಯುತ್ತಾರೆ. ಈ ಹಾರ್ಮೋನ್ ಗರ್ಭ ಧರಿಸಲು ಸಹಕಾರಿ. ಗರ್ಭಪಾತವನ್ನು ತಡೆಯುತ್ತದೆ.
ಸಾಮಾನ್ಯ ಹಾರ್ಮೋನ್ ಸಮಸ್ಯೆಯಿಂದ ಕಾಡುವ ತಲೆನೋವು ಸೌಮ್ಯತೆಯಿಂದ ಕೂಡಿರುತ್ತದೆ. ಅದೇ ಮುಟ್ಟಿನ ಸಮಯದಲ್ಲಿ ಕಾಡುವ ಮೈಗ್ರೇನ್ ತೀವ್ರವಾದ ನೋವವನ್ನು ಉಂಟುಮಾಡುತ್ತದೆ. ಅಹಿತಕರ ಭಾವನೆಯನ್ನು ಮೂಡಿಸುವ ಈ ಮೈಗ್ರೇನ್ ದೈನಂದಿನ ಚಟುವಟಿಕೆಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮೈಗ್ರೇನ್ನಿಂದ ಆಗಾಗ ವಾಕರಿಕೆ, ವಾಂತಿ, ಪ್ರಕಾಶಮಾನವಾದ ಬೆಳಕಿಗೆ ಸಂವೇದನೆ ಮತ್ತು ಥ್ರೋಬಿಂಗ್ ನೋವು ಕಾಣಿಸಿಕೊಳ್ಳುವುದು. ಈ ಆರೋಗ್ಯ ಸಮಸ್ಯೆಯು ಜಗತ್ತಿನಾದ್ಯತಂತ ಹೆಚ್ಚಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುವುದು.