ಹೆಲ್ತ್ ಟಿಪ್ಸ್ : ಮಹಿಳೆಯರು, ಪುರುಷರು ಎಷ್ಟೇ ಸುಂದರವಾಗಿದ್ದರೂ, ಎಷ್ಟೇ ಬೆಳ್ಳಗಿದ್ದರೂ ಮೇಕ್ ಅಪ್ ಮಾಡದೇ ಹೊರಗೆ ಬರಲಾರರು. ಒಳ್ಳಯ ಉಡುಪಿನ ಜೊತೆ ಈಗ ಮೇಕ್ ಅಪ್ ಪೈಪೋಟಿಯಾಗಿದೆ. ಆಯಾ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಮೇಕ್ ಅಪ್ ಮಾಡುತ್ತಿದ್ದಾರೆ ಈ ಯುವಕರು. ಅವರು ಎಷ್ಟೇ ಮೇಕ್ ಅಪ್ ಮಾಡಿದರೂ ಸಹ ಕೆಲವರ ಮನಸ್ಸಿಗೆ ಹಿಡಿಸಿರುವುದಿಲ್ಲ. ಕಾರಣ ಮುಖದಲ್ಲಿ ಕಾಣಿಸುವ ಬ್ಲ್ಯಾಕ್ ಹೆಡ್ಸ್ ನಿಂದಾಗಿ ಕೆಲವರು ಹೆಚ್ಚಿನ ಪ್ರಮಾಣದ ಮೇಕ್ ಅಪ್ ಮಾಡಿಕೊಳ್ಳುತ್ತಾರೆ. ಆದರೆ ಈ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಇಲ್ಲಿದೆ ಸುಲಭವಾದ ಮನೆ ಮದ್ದು…
ಬ್ಲ್ಯಾಕ್ ಹೆಡ್ಸ್ ನಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಮೂಗಿನ ಮೇಲೆ, ಮೂಗಿನ ಅಕ್ಕಪಕ್ಕದಲ್ಲಿ, ತುಟಿಗಳ ಅಕ್ಕಪಕ್ಕದಲ್ಲಿ ಬ್ಲಾಕ್ ಹೆಡ್ಸ್ ಹೆಚ್ಚಾಗಿ ಕಂಡುಬರುತ್ತವೆ. ಇವುಗಳಿಂದಾಗಿ ಮುಖದಲ್ಲಿ ಹೊಳಪು ಕಡಿಮೆ ಕಾಣುತ್ತದೆ. ಅಲ್ಲದೇ ಮುಖದ ಚರ್ಮವು ಸಡಿಲಗೊಳ್ಳಲು ಪ್ರಾರಂಭಿಸುತ್ತದೆ. ಹೀಗಾಗಿ ನಿಂಬೆಹಣ್ಣಿನ ಮೂಲಕ ಸುಲಭವಾಗಿ ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಎರಡನ್ನೂ ಹೋಗಲಾಡಿಸಲು ಈ ವಸ್ತುವನ್ನು ಬಳಸಿ ನೋಡಿ…
ಕಪ್ಪು ಚುಕ್ಕೆಗಳಿಗೆ ನಿಂಬೆ ಹಣ್ಣು ರಾಮಬಾಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಿಂಬೆ ಹಣ್ಣು ಬಹಳ ದುಬಾರಿಯಾಗಿದೆ. ಆದ್ರೆ ತ್ವಚೆಯ ಆರೈಕೆಗೆ ಇದು ಅವಶ್ಯಕವಾಗಿದೆ. ಇದು ಔಷಧಿಗಳಿಗಿಂತಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೇ ನಿಂಬೆ ಹಣ್ಣನ್ನು ಬಳಸಿ ನಿಮ್ಮ ಮುಖದ ಫೋರ್ಸ್ ಓಪನ್ ಮಾಡಬಹುದು, ಬಳಿಕ ಬ್ಲಾಕ್ ಹೆಡ್ಸ್ ರಿಮೂವ್ ಮಾಡುವುದು ಸುಲಭವಾಗುತ್ತದೆ.
ಈ ನಿಂಬೆ ಹಣ್ಣನ್ನು ಬ್ಲ್ಯಾಕ್ ಹೆಡ್ಸ್ ನಿವಾರಣೆಗೆ ಹೀಗೆ ಬಳಸಿ, 1 ಚಮಚ ಅಡಿಗೆ ಸೋಡಾ ಮತ್ತು ಅರ್ಧ ಚಮಚ ನಿಂಬೆ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಆ ಪೇಸ್ಟ್ ಅನ್ನು ಎಲ್ಲೆಲ್ಲಿ ಬ್ಲಾಕ್ ಹೆಡ್ಸ್ ಇದೆಯೋ ಅಲ್ಲೆಲ್ಲ ಹಚ್ಚಿ, ಸ್ವಲ್ಪ ಹೊತ್ತು ಹಾಗೇ ಒಣಗಲು ಬಿಡಿ. ಪೇಸ್ಟ್ ಒಣಗಿದಾಗ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಬ್ಲಾಕ್ ಹೆಡ್ಸ್ ತನ್ನಷ್ಟಕ್ಕೆ ತಾನೇ ಮಾಯವಾಗುತ್ತದೆ.
ಇನ್ನು ವೈಟ್ ಹೆಡ್ಸ್ ಕೂಡ ತ್ವಚೆಯ ಅಂದವನ್ನ ಹಾಳು ಮಾಡುತ್ತದೆ. ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸುವ ಗ್ರಂಥಿಗಳು ಊದಿಕೊಂಡಾಗ ಬಿಳಿ ಚುಕ್ಕೆಗಳು ರೂಪುಗೊಳ್ಳುತ್ತವೆ. ವೈಟ್ ಹೆಡ್ಸ್ ಹೋಗಲಾಡಿಸಲು ನಿಂಬೆ ರಸ ಮತ್ತು ನೀರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಬೆರಳುಗಳ ಸಹಾಯದಿಂದ ವೈಟ್ ಹೆಡ್ಸ್ ಮೇಲೆ ಹಚ್ಚಿ. ಲಘುವಾಗಿ ಮಸಾಜ್ ಮಾಡಿಕೊಂಡು 20 ನಿಮಿಷ ಹಾಗೇ ಬಿಡಿ. ನಂತರ ಮುಖವನ್ನು ತೊಳೆದುಕೊಳ್ಳಿ. ಈ ರೀತಿ ಮಾಡಿದರೆ ವೈಟ್ ಹೆಡ್ಸ್ ಸಮಸ್ಯೆ ನಿವಾರಣೆಯಾಗುತ್ತದೆ.