ಕೊರೊನಾ ಸಮಯದಲ್ಲಿ ಎಲ್ಲರೂ ಮನೆಮದ್ದುಗಳನ್ನು ತಿಳಿಯಲು ತುಂಬಾನೇ ಆಸಕ್ತಿ ತೋರುತ್ತಿದ್ದರು. ಅಜ್ಜಿ ಕಾಲದ ಚಿಕ್ಕ ಪುಟ್ಟ ಮನೆಮದ್ದುಗಳು ತುಂಬಾ ಜನರಿಗೆ ಗೊತ್ತೇ ಇರಲಿಲ್ಲ, ಆ ಮದ್ದುಗಳನ್ನು ಆ ಸಮಯದಲ್ಲಿ ಹೆಚ್ಚಾಗಿ ಬಳಸಲಾಯಿತು. ಅದರಲ್ಲೂ ಜನರ ಆರೋಗ್ಯ ಕಾಪಾಡುವಲ್ಲಿ ಕಷಾಯ, ಕೆಲವೊಂದು ಆಯುರ್ವೇದ ಹರ್ಬ್ಸ್ ಪ್ರಮುಖ ಪಾತ್ರವಹಿಸಿದೆವು.
ಮಳೆಗಾಲ ಶುರುವಾಗಿ, ಈ ಸಮಯದಲ್ಲಿ ನೀವು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಅದಕ್ಕೆ ಮನೆಮದ್ದುಗಳು ಸಹಾಯ ಮಾಡುತ್ತದೆ, ಅದರಲ್ಲೂ ಆಯುರ್ವೇದಲ್ಲಿ ಬಳಸುವ ಕೆಲವೊಂದು ಗಿಡಮೂಲಿಕೆಗಳು ತುಂಬಾನೇ ಪರಿಣಾಮಕಾರಿಯಾಗಿದೆ. ನಾವು ಈ ಲೇಖನದಲ್ಲಿ ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಹಾಗೂ ಅಶ್ವಗಂಧ ಬಳಸುವುದು ಹೇಗೆ ಎಂದು ಹೇಳಲಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ತುಳಸಿ ಹಾಗೂ ಅಶ್ವಗಂಧದ ಕಷಾಯ.
*ಚಮಚ ಅಶ್ವಗಂಧ ಪುಡಿ, 5-6 ತುಳಸಿ ಇವುಗಳನ್ನು ಒಂದು ಲೋಟ ಕುದಿಯುವ ನೀರಿಗೆ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ನೀವು ಈ ಕಷಾಯ ದಿನಾ ಒಂದು ಲೋಟ ಅಥವಾ ಎರಡು ದಿನಕ್ಕೊಮ್ಮೆ ಕುಡಿದರೆ ಕೆಮ್ಮು, ನೆಗಡಿ ಈ ಬಗ್ಗೆಯ ಸಮಸ್ಯೆ ತಡೆಗಟ್ಟಬಹುದು. ಅಶ್ವಗಂಧ-ತುಳಸಿ ಕಷಾಯ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಅಶ್ವಗಂಧ -ತುಳಸಿ ಕಷಾಯ ಮಾಡಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಇದು ಸೋಂಕಿನ ವಿರುದ್ಧ ಹೋರಾಡುವಂತೆ ದೇಹವನ್ನು ಬಲಪಡಿಸುತ್ತದೆ. ಮಳೆಗಾಲದಲ್ಲಿ ಸೋಂಕು ತಗುಲಿ ಕಾಯಿಲೆ ಬೀಳುವುದು ಸಹಜ, ಇದನ್ನು ತಡೆಗಟ್ಟುವಲ್ಲಿ ಈ ಕಷಾಯ ಸಹಕಾರಿಯಾಗಿದೆ.