ಚಿಕ್ಕಬಳ್ಳಾಪುರ ಜಿಲ್ಲೆಯ ಅತಿದೊಡ್ಡ ಕೆರೆಯದಂತಹ ಅಮಾನಿ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಅಮಾನಿ ಕೆರೆಗೆ ಎಚ್.ಎನ್ ವ್ಯಾಲಿಯಿಂದ ಕೆರೆಗೆ ನೀರನ್ನು ಬಿಡಲಾಯಿತು. ಆದರೆ ಅದೇನಾಯಿತೋ ಗೊತ್ತಿಲ್ಲ ಯುಗಾದಿ ಹಬ್ಬದ ಹೊಸತೊಡುಕು ಹಿನ್ನೆಲೆ ಕೆರೆಯ ಮೀನುಗಳನ್ನು ಹಿಡಿದು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕಡೆದ ಮಾರಾಟ ಮಾಡಿದ್ರು, ಭರ್ಜರಿ ಮೀನೂಟ ತಿಂದು ಬೆಳಗ್ಗೆ ನಿದ್ದೆಯಿಂದ ಏಳುವಷ್ಟರಲ್ಲಿ ಗೋಪಾಲಕೃಷ್ಣ ಅಮಾನಿ ಕೆರೆಯಲ್ಲಿ ಸಾವಿರಾರು ಮೀನುಗಳು ಮಾರಣಹೋಮವೇ ನಡೆದಿದೆ. ಗ್ರಾಮದಲ್ಲಿ ಕೆರೆಯ ನೀರಿನ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗಿದೆ. ಕೆರೆಯ ನೀರಿಗೆ ಯಾರೋ ವಿಷ ಪ್ರಾಶನ ಮಾಡಿದ್ದಾರೆ. ಇಲ್ಲ ಅಂದ್ರೆ ಕೆರೆಯ ನೀರೇ ವಿಷವಾಗಿದಿಯೋ ಎಂದು ಗುಸು ಚರ್ಚೆ ಆರಂಭವಾಗಿದೆ.
ರಾಜ್ಯ್ ನ್ಯೂಸ್ ನಲ್ಲಿ ಸುದ್ದಿ ಬಿತ್ತರ ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನೀರ್ದೇಶಕಿ ಯಶಸ್ವಿನಿ ಕೆರೆಗೆ ಬೇಟಿ ನೀಡಿ ಸತ್ತಿರುವ ಮೀನುಗಳ ಶ್ಯಾಂಪಲ್ಸ್ ನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಿದ್ರು. ಸತ್ತಿರುವ ಮೀನುಗಳನ್ನು ಹೊರತೆಗದ ಬಳಿಕ ಪದೇ ಪದೇ ಮೀನುಗಳ ಸಾಯುವ ಸಂಭವ ಹಿನ್ನೆಲೆ ಮತ್ತಷ್ಟು ಪರಿಶೀಲನೆ ಚುರುಕುಗೊಳಿಸಿ ಸದ್ಯಕ್ಕೆ ಕೆರೆಯ ನೀರನ್ನು ಯಾರು ಬಳಸದಂತೆ ಎಚ್ಚರಿಕೆ ನೀಡಿದ್ರು.