ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಡುಪ್ಲೆಸಿಸ್ ಮುನ್ನಡೆಸಲಿದ್ದಾರೆ. ಇದರೊಂದಿಗೆ ಆರ್ಸಿಬಿ ತಂಡವನ್ನು ಮುನ್ನಡೆಸಿದ 7ನೇ ಕ್ಯಾಪ್ಟನ್ ಎನಿಸಿಕೊಳ್ಳಲಿದ್ದಾರೆ. ಮಾರ್ಚ್ 26 ರಿಂದ ಟೂರ್ನಿಗೆ ಚಾಲನೆ ದೊರೆಯಲಿದೆ. ಹೊಸ ಸೀಸನ್ ಅನ್ನು ಆರ್ಸಿಬಿ ಹೊಸ ನಾಯಕನೊಂದಿಗೆ ಆರಂಭಿಸುತ್ತಿರುವುದು ವಿಶೇಷವಾಗಿದೆ. ಕಳೆದ 14 ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡವನ್ನು ಆರು ನಾಯಕರುಗಳು ಮುನ್ನಡೆಸಿದ್ದಾರೆ. ಅದರಲ್ಲಿ ಮೂವರು ವಿದೇಶಿ ಆಟಗಾರರಿದ್ದರೆ, ಮೂವರು ಭಾರತೀಯ ಆಟಗಾರರಿದ್ದರು. ರಾಹುಲ್ ದ್ರಾವಿಡ್ ಆರ್ಸಿಬಿ ತಂಡದ ಮೊದಲ ನಾಯಕ. 2008 ರಲ್ಲಿ ದ್ರಾವಿಡ್ ಆರ್ಸಿಬಿ ತಂಡವನ್ನು 14 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ಆರ್ಸಿಬಿ 4 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಕೆವಿನ್ ಪೀಟರ್ಸನ್ , ಅನಿಲ್ ಕುಂಬ್ಳೆ, ಡೇನಿಯಲ್ ವೆಟ್ಟೋರಿ, ಶೇನ್ ವಾಟ್ಸನ್: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಆರ್ ಸಿಬಿ ತಂಡವನ್ನ ಮುನ್ನಡೆಸಿದ ಆಟಗಾರರಾಗಿದ್ದಾರೆ.
0 321 Less than a minute