ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಒಂದು ಮೆಟ್ರೋ ರೈಲಿನ ಎಲ್ಲಾ ಬೋಗಿಗಳ ಮೇಲೆ ಆತ್ಮ ನಿರ್ಭರ ಭಾರತ ಮತ್ತು ಸ್ವಾತಂತ್ರ ಅಮೃತ ಮಹೋತ್ಸವದ ಚಿಹ್ನೆಗಳನ್ನು ಪ್ರದರ್ಶಿಸಲಾಗಿದೆ. ಈ ವಿಶೇಷ ತ್ರಿವರ್ಣ ರಂಗಿನ ರೈಲಿಗೆ BMRCL ವ್ಯವಸ್ಥಾಪಕ ನಿರ್ಧನಿರ್ದೇಶಕರಾದ ಅಂಜುಂ ಪರ್ವೇಜ್ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಎರಡು ವರ್ಷ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ಒಂದು ರೈಲಿಗೆ ಆತ್ಮ ನಿರ್ಭರ ಭಾರತ ಹಾಗೂ ಅಮೃತ ಮಹೋತ್ಸವದ ಚಿಹ್ನೆಯುಳ್ಳ ಪೋಸ್ಟರ್ ಹಾಕಲಾಗಿದೆ. ತ್ರಿವರ್ಣ ಧ್ವಜದ ಬಣ್ಣದಲ್ಲಿ ಬೋಗಿಗಳ ಹೊರಭಾಗವನ್ನು ಚಿತ್ರಿಸಲಾಗಿದೆ. ಸದ್ಯ ಒಂದು ರೈಲಿಗೆ ಮಾತ್ರ ಈ ರೀತಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದವರ ಕುರಿತಾಗಿ ಕವರ್ ಮಾಡಲಾಗುವುದು ಎಂದು ತಿಳಿಸಿದ್ರು.
0 316 Less than a minute