ನಕಲಿ ಚಿನ್ನ ಅಡ ಇಟ್ಟು 1.5 ಕೋಟಿ ಸಾಲ – ಸಿಕ್ಕಿಬಿದ್ದ ನಗರಸಭೆ ಅಧ್ಯಕ್ಷೆಯ ಪುತ್ರ

ಗದಗ ( gadaga ) ದಲ್ಲಿ ದೊಡ್ಡ ನಕಲಿ ಚಿನ್ನದ ಗ್ಯಾಂಗ್ ಠಿಕಾಣಿ ಹೂಡಿದೆ. ಎರಡು ರಾಷ್ಟ್ರೀಯ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ಸಾಲ ಪಡೆದು ಭಾರಿ ವಂಚನೆ ಮಾಡಿದ್ದಾರೆ.

ಗದಗ ( gadaga ) ದಲ್ಲಿ ದೊಡ್ಡ ನಕಲಿ ಚಿನ್ನದ ಗ್ಯಾಂಗ್ ಠಿಕಾಣಿ ಹೂಡಿದೆ. ಎರಡು ರಾಷ್ಟ್ರೀಯ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ಸಾಲ ಪಡೆದು ಭಾರಿ ವಂಚನೆ ಮಾಡಿದ್ದಾರೆ. ನಕಲಿ ಚಿನ್ನ ಇಟ್ಟು ಪ್ರತಿ ಬ್ಯಾಂಕ್ ನಲ್ಲಿ ಕೋಟ್ಯಂತರ ರೂ ಸಾಲ ಪಡೆದು ದೊಡ್ಡ ಟೋಪಿ ಹಾಕಿದ್ದು, ಬ್ಯಾಂಕ್ ಅಧಿಕಾರಿಗಳು ಪತರಗುಟ್ಟಿ ಹೋಗಿದ್ದಾರೆ.

ನಕಲಿ ಚಿನ್ನದ ಗ್ಯಾಂಗ್ ಗದಗ ನಗರದ ಐಡಿಬಿಐ ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ 34 ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಸೇರಿದಂತೆ 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಷ್ಟೇ ಅಲ್ಲ ಯೂನಿಯನ್ ಬ್ಯಾಂಕ್ ನಲ್ಲೂ ನಕಲಿ ಚಿನ್ನ ಇಟ್ಟು 1 ಕೋಟಿ 57 ಲಕ್ಷ 66 ಸಾವಿರ ಸಾಲ ಪಡೆದಿದ್ದಾರೆ ಎಂದು ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ. ಇದನ್ನೂ ಓದಿ : – FSIL ವರದಿ ಸಿಕ್ಕ ಬಳಿಕ ಚಂದ್ರಶೇಖರ್ ಸಾವಿನ ಬಗ್ಗೆ ಹೇಳಬಹುದು – ADGP ಅಲೋಕ್ ಕುಮಾರ್

ವಂಚನೆಯ ಮಾಸ್ಟರ್ ಮೈಂಡ್ ದತ್ತಾತ್ರೇಯ ಬಾಕಳೆ, ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷ ಸುನಂದಾ ಬಾಕಳೆ ಮಗನಾಗಿದ್ದಾನೆ. ಇದೇ ವರ್ಷದ ಏಪ್ರಿಲ್ ತಿಂಗಳಿಂದ ಜೂನ್ ವರೆಗೆ ದತ್ತಾತ್ರೇಯ ಸಹಚರರ ಹೆಸರಲ್ಲಿ ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟು ಕೋಟ್ಯಂತರ ಸಾಲ ಪಡೆದಿದ್ದಾರೆ.

ಇದನ್ನೂ ಓದಿ : – ಮೈಸೂರಿನಲ್ಲಿ ನಿದ್ದೆಗಡಿಸಿದ್ದ ಭಯಾನಕ ಚಿರತೆ ಕೊನೆಗೂ ಸೆರೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!