ವಿಧಾನಸೌಧ (Vidhana soudha) ದಲ್ಲಿ 10 ಲಕ್ಷ ಹಣ ಸಿಕ್ಕ ಪ್ರಕರಣದಲ್ಲಿ ಬಂಧಿತನಾಗಿದ್ದ ಮಂಡ್ಯ ಮೂಲದ ಪಿಡಬ್ಲ್ಯೂಡಿ ಕಿರಿಯ ಎಂಜಿನಿಯರ್ ಜಗದೀಶ್ಗೆ ಕೋರ್ಟ್ (Court) ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಿಧಾನಸೌಧದ ಮುಖ್ಯದ್ವಾರ ಬಳಿ 10.5 ಲಕ್ಷ ಹಣ ಸಿಕ್ಕ ಪ್ರಕರಣದಲ್ಲಿ ಜಗದೀಶ್ನನ್ನು ಬಂಧಿಸಿದ್ದ ವಿಧಾನಸೌಧ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರಿಗೆ ಜಗದೀಶ್ (Jagdish) ಯಾರಿಗೆ ಹಣ ಕೊಡೋಕೆ ಬಂದಿದ್ದ ಅನ್ನೋ ಮಾಹಿತಿಯನ್ನ ಬಾಯಿಬಿಟ್ಟಿರಲಿಲ್ಲ. ಆದ್ದರಿಂದ ಲಂಚದ ರೂಪದಲ್ಲಿ ಹಣ ಕೊಡಲು ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆ ಮುಂದುವರಿರಿಸಲಾಗಿತ್ತು. ಜಗದೀಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಕೊನೆಯ ದೂರವಾಣಿ ಕರೆ ಹಾಗೂ ಕೆಲ ವಾಟ್ಸಪ್ ಚಾಟ್ಗಳನ್ನು ಡಿಲೀಟ್ ಮಾಡಲಾಗಿದೆ ಎನ್ನಲಾಗಿದೆ. ಇಂದು ಆರೋಪಿ ಜಗದೀಶ್ನನ್ನ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಆದ್ರೆ ನ್ಯಾಯಾಲಯ ಆರೋಪಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಇದನ್ನು ಓದಿ :- Air India Case- ಏರ್ ಇಂಡಿಯಾದಲ್ಲಿ ಮಹಿಳೆ ಮೇಲೆ ಮೂತ್ರ- ಬೆಂಗಳೂರಿನಲ್ಲಿ ಅಡಗಿದ್ದ ಉದ್ಯಮಿ!