ಸಂತೋಷ್ ಸೂಸೈಡ್ ಕೇಸ್ – ಮೊದಲು ಈಶ್ವರಪ್ಪನನ್ನ ಬಂಧಿಸಿ – ಸಿದ್ದರಾಮಯ್ಯ, ಡಿಕೆಶಿ ಆಗ್ರಹ

ಸಂತೋಷ್ ಪಾಟೀಲ್ (Santhosh patil) ಸೂಸೈಡ್ (suicide) ಪ್ರಕರಣ ಕುರಿತಂತೆ ಕಾಂಗ್ರೆಸ್ ನಾಯಕರು ಈಶ್ವರಪ್ಪ ಮೇಲೆ ಹರಿಹಾಯ್ದಿದ್ದಾರೆ. ಸಚಿವ ಈಶ್ವರಪ್ಪನನ್ನ ಮೊದಲು ಬಂಧಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈಶ್ವರಪ್ಪ ವಿರುದ್ಧ ಎಫ್ ಐ ಆರ್ (FIR) ದಾಖಲಿಸಬೇಕು. ಈಶ್ವರಪ್ಪನನ್ನ(eshwarappa) ಮಂತ್ರಿಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಂತೋಷ್ ಸೂಸೈಡ್ ಡೆತ್ ನೋಟ್ ನಲ್ಲಿ ಈಶ್ವರಪ್ಪನೇ ಕಾರಣ ಅಂತಾ ಹೇಳಿದ್ದಾನೆ ಎಂದು ಸಿದ್ದರಾಮಯ್ಯ ಹೇಳಿದ್ರು. ಇದನ್ನುಓದಿ – ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಮೊದಲ ಬಲಿ ಆಗಿದೆ – ಸುರ್ಜೇವಾಲ

ಸಚಿವ ಕೆ ಎಸ್ ಈಶ್ವರಪ್ಪ


ಇದು ಕೊಲೆ ಎಂದ ಡಿಕೆಶಿ
ಸಂತೋಷ ಪಾಟೀಲ್ ಸಾವಿನ ಬಗ್ಗೆ ಸ್ಪೋಟಕ ಸುದ್ದಿ ಕೊಡ್ತಾ ಇದ್ದೀರಾ ಎಂದು ಮಾಧ್ಯಮದವರಿಗೆ ಡಿಕೆಶಿ (DKS) ಪ್ರಶ್ನಿಸಿದ್ದಾರೆ. ಎಲ್ಲರಿಗೂ ಈ ವಿಚಾರ ಗೊತ್ತಿದೆ. ಈಶ್ವರಪ್ಪ ಮೇಲೆ ಕೇಸ್ ಆಗಬೇಕು. ಸುಮ್ಮನೆ ತನಿಖೆ ಬೇಡ, ಈಶ್ವರಪ್ಪ ಬಂಧನ ಆಗಬೇಕು ಎಂದು ಆಗ್ರಹಿಸಿದ್ದಾರೆ. ಭ್ರಷ್ಟಾಚಾರ ಪ್ರಕರಣ ಕೂಡ ದಾಖಲಿಸಬೇಕು. ೪೦% ಕಮಿಷನ್ ಸರ್ಕಾರ ಅಂತ ನಾನು ಹೇಳಿದ್ದು ಅಲ್ಲ. ಗುತ್ತಿಗೆದಾರರು ಹೇಳಿದ್ದು ಎಂದು ತಿಳಿಸಿದ್ರು. ಸಿಎಂ ಯಾರ ರಕ್ಷಣೆ ಮಾಡಬಾರದು. ಮೊದಲು ಬಂಧಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನುಓದಿಈಶ್ವರಪ್ಪ ಹೆಸರು ಬರೆದಿಟ್ಟು ಉಡುಪಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!