ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ನೆರವಿನ ಹಸ್ತ ಹರಿದು ಬರುತ್ತಿದ್ದು, 28 ರಾಷ್ಟ್ರಗಳು ಶಸ್ತ್ರಾಸ್ತ್ರ ಹಾಗೂ ಸೇನಾ ನೆರವು ಘೋಷಿಸಿವೆ.
ಸ್ಥಳಾಂತರ ಬೇಡ, ನಮಗೆ ಶಸ್ತ್ರಾಸ್ತ್ರ ನೆರವು ನೀಡುವುದಿದ್ದರೆ ನೀಡಿ ಎಂದು ಉಕ್ರೇನ್ ಜಾಗತಿಕ ಮಟ್ಟದಲ್ಲಿ ಪರೋಕ್ಷ ಬೆಂಬಲ ನಿರಾಕರಿಸಿದ ಬೆನ್ನಲ್ಲೇ ಹಲವು ದೇಶಗಳು ಉಕ್ರೇನ್ ನೆರವಿಗೆ ಧಾವಿಸಿವೆ.
ಅಮೆರಿಕ, ಜರ್ಮನಿ, ಹಾಲೆಂಡ್, ಫಿನ್ ಲ್ಯಾಂಡ್, ಬೆಲ್ಜಿಯಂ, ರೊಮೇನಿಯಾ ಸೇರಿದಂತೆ ಹಲವು ದೇಶಗಳು ಬೆಂಬಲ ಘೋಷಿಸಿದ್ದು, ಶೀಘ್ರದಲ್ಲೇ ಉಕ್ರೇನ್ ದೇಶವನ್ನು ತಲುಪಲಿವೆ.
ಅಮೆರಿಕ 390 ದಶಲಕ್ಷ ಡಾಲರ್ ನೆರವು, ಶಸ್ತ್ರಾಸ್ತ್ರಗಳನ್ನು ಪೂರೈಸುವ ಭರವಸೆ ನೀಡಿದರೆ, ನೆದರ್ಲೆಂಡ್ ಮತ್ತು ಜರ್ಮನಿ 1 ಸಾವಿರ ಯುದ್ಧ ಟ್ಯಾಂಕ್ ಹಾಗೂ ವಿಮಾನ ನಿಗ್ರಹ ಕ್ಷಿಪಣಿಗಳನ್ನು ಕಳುಹಿಸಿಕೊಡುವುದಾಗಿ ಘೋಷಿಸಿವೆ.
ಬೆಲ್ಜಿಯಂ 300 ಸೈನಿಕರನ್ನು ಕಳುಹಿಸಿಕೊಡಲಿದ್ದು ರೊಮೇನಿಯಾ ವಿಮಾನ ನಿಗ್ರಹ 200 ಕ್ಷಿಪಣಿ ತಲುಪಿಸಲಿದೆ. ರಷ್ಯಾಗೆ ಹೊಂದಿಕೊಂಡಿರು ಫಿನ್ ಲ್ಯಾಂಡ್ ತಮ್ಮ ದೇಶದ ಮೇಲೆ ರಷ್ಯಾ ವಿಮಾನ ಹಾರಾಟಕ್ಕೆ ನಿರ್ಬಂಧ ಘೋಷಿಸಿದೆ.