ಮುಖ್ಯಮಂತ್ರಿ ಭಗವಂತ್ ಮಾನ್ ( Bhagavant Mann ) ನೇತೃತ್ವದ ಪಂಜಾಬ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಲ್ಲಿ 424 ಜನರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿದೆ.
ಪಂಜಾಬ್ ಸರ್ಕಾರ ( Government of Punjab ) ಅನೇಕ ನಿವೃತ್ತ ಪೊಲೀಸ್ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ರಾಜಕೀಯ ವ್ಯಕ್ತಿಗಳು ಸೇರಿ ಹಲವರ ಭದ್ರತೆಯನ್ನು ಹಿಂಪಡೆದಿದೆ. ಹಿಂದಿನ ಏಪ್ರಿಲ್ ನಲ್ಲಿ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ಮತ್ತು ಇತರ ನಾಯಕರು ಸೇರಿದಂತೆ 184 ಜನರ ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರ ಆದೇಶಿಸಿತ್ತು. ಇದನ್ನೂ ಓದಿ : – ಜಮ್ಮು-ಕಾಶ್ಮೀರದ ಲಡಾಕ್ ನಲ್ಲಿ ಭಾರೀ ಅಪಘಾತ – 7 ಮಂದಿ ಯೋಧರು ಹುತಾತ್ಮ
ಪ್ರಮುಖವಾಗಿ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪುತ್ರ ರಣೀಂದರ್ ಸಿಂಗ್ ಮತ್ತು ಕಾಂಗ್ರೆಸ್ ಶಾಸಕ ಪರತಾಪ್ ಸಿಂಗ್ ಬಜ್ವಾವೆರೆ ಅವರ ಪತ್ನಿ ಕುಟುಂಬದ ಭದ್ರತೆಯನ್ನು ಕಳೆದ ತಿಂಗಳು ಹಿಂಪಡೆಯಲಾಗಿದೆ.
ಇದನ್ನೂ ಓದಿ : – ವಿಧಾನಪರಿಷತ್ ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ