48 ವರ್ಷ ಹಳೆಯ ರೆಸ್ಯೂಮ್ ಶೇರ್ – ಸಾಮಾಜಿಕ ಜಾಲ ತಾಣದಲ್ಲಿ ಸಂಚಲನ ಸೃಷ್ಟಿಸಿದ ಬಿಲ್ ಗೇಟ್ಸ್

ಸಾವಿರಾರು ಜನರಿಗೆ ಉದ್ಯೋಗ ನೀಡಿದ ಉದ್ಯೋಗದಾತ, ಟೆಕ್ ದೈತ್ಯ, ಮೈಕ್ರೋಸಾಫ್ಟ್ನ ಸಹ ಸಂಸ್ಥಾಪಕ ಬಿಲ್ಗೇಟ್ಸ್ (bill gates) ತಮ್ಮ ರೆಸ್ಯೂಮ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಮಾರು ಐದು ದಶಕ ಸಮೀಪಿಸಿದ 48 ವರ್ಷ ಹಳೆಯದಾದ ಈ ರೆಸ್ಯೂಮ್ ಈಗ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ. ಈ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದಾರೆ.


ನೀವು ಇತ್ತೀಚಿಗೆ ಪದವಿ ಪಡೆದವರು ಆಗಿರಲಿ ಅಥವಾ ಕಾಲೇಜು ಡ್ರಾಪ್ಔಟ್ ಆಗಿರಲಿ, ನಿಮ್ಮ ರೆಸ್ಯೂಮ್ ನನ್ನ 48 ವರ್ಷಗಳ ಹಿಂದಿನ ರೆಸ್ಯೂಮ್ಗಿಂತ ನಿಮ್ಮ ರೆಸ್ಯೂಮ್(resume) ಬಹಳ ಚೆನ್ನಾಗಿರುತ್ತೆ. ನಿಮ್ಮ ರೆಸ್ಯೂಮ್ ಬಹಳ ಉತ್ತಮವಾಗಿ ಕಾಣುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಬಿಲಿಯನೇರ್ ಬಿಲ್ ಗೇಟ್ಸ್ ಭರವಸೆ ನೀಡಿದ್ದಾರೆ.
ಆ ಸಮಯದಲ್ಲಿಯೇ ಬಿಲ್ಗೇಟ್ಸ್ ಸಾಕಷ್ಟು ಕೋರ್ಸ್ಗಳನ್ನು ತೆಗೆದುಕೊಂಡಿದ್ದರು. ಎಲ್ಲದರಲ್ಲೂ ಎ ಗ್ರೇಡ್ ಗಳಿಸಿದ್ದರು. ಸಾಮಾನ್ಯವಾಗಿ ಹೆಚ್ಚಿನ ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ ತೋರಿಸಲು ಯಾವುದೇ ಅನುಭವವಿರುವುದಿಲ್ಲ. ಆದರೆ ಬಿಲ್ಗೇಟ್ಸ್ ಅವರು ಈ ವಿಚಾರಕ್ಕೆ ತದ್ವಿರುದ್ಧವಾಗಿದ್ದರು.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ (Bill Gates) ಮೊದಲ ರೆಸ್ಯೂಮ್ ವಿಶ್ವದಾದ್ಯಂತ ಲಕ್ಷಾಂತರ ಯುವ ಉದ್ಯೋಗಾಕಾಂಕ್ಷಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಇದಕ್ಕೆ ಹಲವರು ವಿವಿಧ ರೀತಿಯ ಕಾಮೆಂಟ್ ಗಳನ್ನ ಮಾಡಿದ್ದಾರೆ.

ಇದನ್ನೂ ಓದಿ : – ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ NDA ಉಪ ರಾಷ್ಟ್ರಪತಿ ಅಭ್ಯರ್ಥಿ ?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!