ಸಂಸದ ಅಸಾದುದ್ದೀನ್ ಓವೈಸಿ ಅವರ ದೆಹಲಿ ನಿವಾಸದ ಮೇಲೆ ದಾಳಿ ಮಾಡಿ ಹಾನಿ ಮಾಡಿದ ಪ್ರಕರಣದಲ್ಲಿ ಹಿಂದೂ ಸೇನೆಯ ಐವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಜೆ ದೆಹಲಿಯ ಅಶೋಕ ರಸ್ತೆಯಲ್ಲಿರುವ ನಿವಾಸಕ್ಕೆ ನುಗ್ಗಿ ಹಿಂದೂಸೇನೆಯ ಕಾರ್ಯಕರ್ತರು ದಾಂಧಲೆ ನಡೆಸಿದ್ದರು.
ದಾಳಿಯ ಹಿಂದೂ ಸೇನಾ ಕಾರ್ಯಕರ್ತರು ಕೋಮುಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗಿದ್ದು, ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಘಟನೆ ಬಗ್ಗೆ ಓವೈಸಿ ಪ್ರತಿಕ್ರಿಯಿಸಿದ್ದಾರೆ.
ಒಬ್ಬ ಸಂಸದನಿಗೆ ಭದ್ರತೆ ಕೊಡಲು ಆಗದ ಅಮಿತ್ ಶಾ, ದೇಶದ ಜನರಿಗೆ ಹೇಗೆ ಭದ್ರತೆ ಕೊಡುತ್ತಾರೆ? ಇದರಿಂದ ಏನು ಸಂದೇಶ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಓವೈಸಿ ಪ್ರಶ್ನಿಸಿದ್ದಾರೆ.