ರಾಂಚಿ ವಿಮಾನ ನಿಲ್ದಾಣದಲ್ಲಿ ( RANCHI AIRPORT ) ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು (Special child) ವಿಮಾನ ಹತ್ತುವುದನ್ನು ನಿರ್ಬಂಧಿಸಿದ್ದ ಇಂಡಿಗೋ ವಿಮಾನ ಸಂಸ್ಥೆಗೆ ಡಿಜಿಸಿಎ (DGCA ) 5 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಮೇ 7ರಂದು ಈ ಘಟನೆ ನಡೆದಿದ್ದು ಈ ಬಗ್ಗೆ ಮೆ.09 ರಂದು ಸ್ಪಷ್ಟನೆ ನೀಡಿದ್ದ ಇಂಡಿಗೋ ಸಂಸ್ಥೆ ‘ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಶೇಷ ಚೇತನ ಮಗುವು ಭಯಭೀತರಾಗಿದ್ದರಿಂದ ತನ್ನ ಕುಟುಂಬದೊಂದಿಗೆ ಮೇ 7ರಂದು ವಿಮಾನವನ್ನು ಹತ್ತಲು ಸಾಧ್ಯವಾಗಲಿಲ್ಲ. ವಿಮಾನ ಸಿಬ್ಬಂದಿ ಕೊನೆಯ ಕ್ಷಣದವರೆಗೂ ಮಗು ಶಾಂತವಾಗುತ್ತದೆ ಎಂದು ಕಾದರು ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿತ್ತು.
ಘಟನೆ ಬಗ್ಗೆ ತನಿಖೆ ನಡೆಸಲು ಡಿಜಿಸಿಎ ತ್ರಿಸದಸ್ಯ ಸಮಿತಿ ರಚಿಸಿತ್ತು. ವಿಶೇಷ ಚೇತನ ಮಗುವನ್ನು ನಿಭಾಯಿಸುವುದರಲ್ಲಿ ಇಂಡಿಗೋ ಸಿಬ್ಬಂದಿಗಳ ಕೊರತೆ ಇದ್ದು, ಪರಿಸ್ಥಿತಿ ಉಲ್ಬಣಗೊಳಿಸಲಾಗಿತ್ತು ಎಂದು ವರದಿ ನೀಡಿತ್ತು. ಇದೀಗ ವಿಶೇಷ ಚೇತನ ಮಗುವಿಗೆ ವಿಮಾನ ಹತ್ತಲು ಬಿಡದ ಇಂಡಿಗೋ ಸಂಸ್ಥೆಗೆ 5 ಲಕ್ಷ ದಂಡ ವಿಧಿಸಿದೆ. ಇದನ್ನೂ ಓದಿ : – ಕುರುಬರ ಸಮಾವೇಶದಿಂದ ದೂರ ಉಳಿದ ಪರಮೇಶ್ವರ್ – ತುಮಕೂರು ಕಾಂಗ್ರೆಸ್ ನ ಭಿನ್ನಮತ ಬಹಿರಂಗ