‘ಆದಿಪುರುಷ್’ ( adipurush ) ಚಿತ್ರದ ಟೀಸರ್ಗೆ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಟೀಕೆಯನ್ನು ಎದುರಿಸಿದ ಚಿತ್ರತಂಡ ಅಕ್ಷರಶಹ ರೋಸಿ ಹೋಗಿತ್ತು. ಮೂಲಗಳ ಪ್ರಕಾರ ಜನವರಿ 12ರಂದು ಚಿತ್ರ ರಿಲೀಸ್ ಮಾಡಬೇಕು ಎಂಬ ಪ್ಲ್ಯಾನ್ನಿಂದ ಚಿತ್ರತಂಡ ಈಗಾಗಲೇ ಹಿಂದೆ ಸರಿದಿದೆ.
ಹೀಗಾಗಿ ಚಿತ್ರತಂಡ ರೀಶೂಟ್ ಮಾಡುವ ಆಲೋಚನೆಯಲ್ಲಿದ್ದು ಇದರಿಂದ ಚಿತ್ರಕ್ಕೆ ಮತ್ತಷ್ಟು ಹೊರೆ ಆಗಲಿದೆ.
ಆದಿಪುರುಷ್’ ಚಿತ್ರತಂಡ ನವರಾತ್ರಿ ಸಂದರ್ಭದಲ್ಲಿ ಟೀಸರ್ ರಿಲೀಸ್ ಮಾಡಿತ್ತು. ಟೀಸರ್ಗೆ ನೆಗೆಟಿವ್ ವಿಮರ್ಶೆಗಳು ಹೆಚ್ಚು ಸಿಕ್ಕವು. ಚಿತ್ರ ವಿಚಿತ್ರ ಪ್ರಾಣಿಗಳು ‘ಆದಿಪುರುಷ್’ ಚಿತ್ರದಲ್ಲಿ ಬಳಕೆ ಆಗಿದೆ ಎಂದು ಕೆಲವರು ಆರೋಪಿಸಿದ್ರು. ಇದನ್ನೂ ಓದಿ : – ಕೂಡಲ ಸಂಗಮದಲ್ಲಿ ಮೃತ್ತಿಕೆ ಸಂಗ್ರಹಿಸಿದ ರಾಜ್ಯದ ಸಚಿವರ ತಂಡ…
ಇನ್ನೂ ಕೆಲವರು ರಾವಣನ ಪಾತ್ರಕ್ಕೆ ಅಪಸ್ವರ ತೆಗೆದಿದ್ರು. ಖಿಲ್ಜಿ ರೀತಿಯಲ್ಲಿ ರಾವಣ ಕಾಣಿಸಿಕೊಂಡಿದ್ದಾನೆ ಎಂದು ಅನೇಕರು ಹೇಳಿದರು. ಈ ಎಲ್ಲಾ ಕಾರಣದಿಂದ ಟೀಸರ್ ಟ್ರೋಲ್ ಆಯಿತು. ಮೀಮ್ ಮಾಡುವವರಿಗೆ ಭರ್ಜರಿ ಕಂಟೆಂಟ್ ಕೂಡ ಸಿಕ್ಕಿತ್ತು.
ಹೀಗಾಗಿ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ನಿರ್ಧರಿಸಲಾಗಿದೆ. ಕೆಲ ದೃಶ್ಯಗಳಲ್ಲಿ VFXಗಳ ಮೇಲೆ ಮರು ಕೆಲಸ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದಕ್ಕಾಗಿ ಮತ್ತಷ್ಟು ಕೋಟಿ ಖರ್ಚು ಮಾಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಲಿದೆ.
ಇದನ್ನೂ ಓದಿ : – ದೆಹಲಿಯಲ್ಲಿ ಹೆಚ್ಚಿದ ಮಾಲಿನ್ಯ ಪ್ರಮಾಣ – ಪ್ರಾಥಮಿಕ ಶಾಲೆಗಳು ಬಂದ್