FIFA ವಿಶ್ವಕಪ್ ಸಿದ್ಧತೆ ವೇಳೆ 500 ಕಾರ್ಮಿಕರು ಸಾವು.! ಸತ್ಯ ಒಪ್ಪಿಕೊಂಡ ಕತಾರ್

ಕತಾರ್ನಲ್ಲಿ (Qatar) ನಡೆಯುತ್ತಿರುವ (FIFA World Cup 2022) ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಫಿಫಾ ವಿಶ್ವಕಪ್ ಗೆ ಆತಿಥ್ಯ ವಹಿಸಿರುವ ಕತಾರ್ ಬಗ್ಗೆ ಬಹುದಿನಗಳಿಂದ ಕೇಳಿಬರುತ್ತಿರುವ ಆರೋಪವೊಂದಕ್ಕೆ ಅಂತಿಮ ತೆರೆ ಬಿದ್ದಿದೆ.

ಕತಾರ್ನಲ್ಲಿ (Qatar) ನಡೆಯುತ್ತಿರುವ (FIFA World Cup 2022) ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಫಿಫಾ ವಿಶ್ವಕಪ್ ಗೆ ಆತಿಥ್ಯ ವಹಿಸಿರುವ ಕತಾರ್ ಬಗ್ಗೆ ಬಹುದಿನಗಳಿಂದ ಕೇಳಿಬರುತ್ತಿರುವ ಆರೋಪವೊಂದಕ್ಕೆ ಅಂತಿಮ ತೆರೆ ಬಿದ್ದಿದೆ.

ಡಿಸೆಂಬರ್ 2010ರಲ್ಲಿ ವಿಶ್ವಕಪ್ ಬಿಡ್ಡಿಂಗ್ ಗೆದ್ದ ಕತಾರ್ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕಾಗಿ ಸುಮಾರು 300 ಬಿಲಿಯನ್ ಡಾಲರ್ (Dollar) ಮೊತ್ತ ಖರ್ಚು ಮಾಡಿದೆ. ಈ ನಡುವೆ ಈ ವಿಶ್ವಕಪ್ ಸಿದ್ಧತೆ ವೇಳೆ ಸಾವಿರಾರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿತ್ತು. ಆರಂಭದಲ್ಲಿ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದ ಕತಾರ್, ಇದೀಗ ಈ ಆರೋಪಗಳು ನಿಜ ಎಂದು ಎಪ್ಪಿಕೊಂಡಿದೆ.ಇದನ್ನೂ ಓದಿ : ಉರುಗ್ವೆ ವಿರುದ್ಧ ಗೆದ್ದು ರೌಂಡ್-16 ಗೆ ಎಂಟ್ರಿ ಕೊಟ್ಟ ಪೋರ್ಚುಗಲ್

ಈ ಬಗ್ಗೆ ಮಾತನಾಡಿರುವ ಫಿಫಾ ವಿಶ್ವಕಪ್ ಮುಖ್ಯಸ್ಥ ಹಸನ್ ಅಲ್ ಥಾವಾರಿ (Hasan Al Thawari) ಸುಮಾರು 400 ರಿಂದ 500 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ನೈಸರ್ಗಿಕ ಸವಾಲನ್ನು ಮೆಟ್ಟಿನಿಂತಿದ್ದ ಕತಾರ್ ಅದ್ಧೂರಿಯಾಗಿ ಈ ಫಿಫಾ ವಿಶ್ವಕಪ್ ಆಯೋಜನೆ ಮಾಡಿದೆ. ಫಿಫಾ ವಿಶ್ವಕಪ್ಗಾಗಿ ಈ ಮರುಭೂಮಿ ದೇಶ ಭಾರಿ ವೆಚ್ಚದಲ್ಲಿ ಏಳು ಹೊಸ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಿದೆ.

ಇಲ್ಲಿನ ತಾಪಮಾನಕ್ಕೆ ಹೊಂದಾಣಿಕೆಯಾಗುವಂತೆ ಪ್ರತಿ ಕ್ರೀಡಾಂಗಣ, ತರಬೇತಿ ಸೌಲಭ್ಯ ಮತ್ತು ಫ್ಯಾನ್ ವಲಯಗಳಲ್ಲಿ ಸೌರ-ಚಾಲಿತ ಕೂಲಿಂಗ್ ತಂತ್ರಜ್ಞಾನ ಅಳವಡಿಸಿ ತಾಪಮಾನವನ್ನು 27 ಡಿಗ್ರಿ ಸೆಲ್ಸಿಯಸ್ ಇರುವಂತೆ ಏರ್ಪಾಟು ಮಾಡಲಾಗಿದೆ. ಎಲ್ಲಾ ಕ್ರೀಡಾಂಗಣಗಳು ಪರಿಸರ ಸ್ನೇಹಿಯಾಗಿದ್ದು, ಅವುಗಳ ತಾಪಮಾನವನ್ನು ನಿಯಂತ್ರಿಸಬಹುದಾಗಿದೆ.

ಇದನ್ನೂ ಓದಿ :  3 ವರ್ಷಕ್ಕೆ 1800 ಕೋಟಿ ರೂ – Ronaldo ಮುಂದೆ ಬಿಗ್ ಆಫರ್ ಇಟ್ಟ ಸೌದಿ ಮೂಲದ ಕ್ಲಬ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!