ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 56ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 194ಕ್ಕೆ ಜಿಗಿದಿದೆ.
ಉಗ್ರ ಸಂಘಟನೆಯೊಂದರ ಆತ್ಮಾಹುತಿ ದಳ ಈಶಾನ್ಯ ಪಾಕಿಸ್ತಾನದ ಶಿಟ್ಟೆ ಮಸೀದಿಯ ಮೇಲೆ ಈ ದಾಳಿ ನಡೆಸಿದೆ.
ಗಾಯಗೊಂಡವರಲ್ಲಿ 50 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಯ ವಕ್ತಾರೆ ಮಹಮದ್ ಅಸೀಂ ಖಾನ್ ತಿಳಿಸಿದ್ದಾರೆ.