ಸಾಲದ ವಿಷಯಕ್ಕೆ ಬೆಂಗಳೂರು ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ- 6 ತಿಂಗಳ ನಂತರ ಪ್ರಕರಣ ಬೆಳಕಿಗೆ !

ಹಣದ ವಿಷಯಕ್ಕೆ ಯುವಕನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಪ್ರಕರಣ 6 ತಿಂಗಳ ನಂತರ ಬೆಳಕಿಗೆ ಬಂದಿದೆ. ಭೀಕರವಾಗಿ ಕೊಲೆಯಾದ ಶರತ್ ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದನಂತೆ.

ಹಣದ ವಿಷಯಕ್ಕೆ ಯುವಕನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ ಪ್ರಕರಣ 6 ತಿಂಗಳ ನಂತರ ಬೆಳಕಿಗೆ ಬಂದಿದೆ. ಭೀಕರವಾಗಿ ಕೊಲೆಯಾದ ಶರತ್ ( sharath ) ಸಾಲ ಪಡೆದು ಹಿಂತಿರುಗಿಸದೆ ಓಡಾಡುತ್ತಿದ್ದನಂತೆ. ಇದರಿಂದ ಶರತ್ ನನ್ನು 6 ತಿಂಗಳ ಹಿಂದೆ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿದ್ದ ಶರತ್ ನನ್ನು ಚಿಕ್ಕಬಳ್ಳಾಪುರ ( chikkaballapura ) ಕ್ಕೆ ಕರೆದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟಿದ್ದರಂತೆ.

ಶರತ್ ನನ್ನು ಅರೆ ನಗ್ನಗೊಳಿಸಿ ಕಟ್ಟಿಹಾಕಿ ಥಳಿಸಿದ್ದರಂತೆ. ನಂತ್ರ ಶರತ್ ನನ್ನ ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು. ಎಷ್ಟರಮಟ್ಟಿಗೆ ಪ್ರಕರಣ ನಿಗೂಢವಾಗಿತ್ತೆಂದರೆ ಕೊಲೆಯಾಗಿ ಆರು ತಿಂಗಳು ಕಳೆದರೂ ಯಾರಿಗೂ ಗೊತ್ತಿರಲಿಲ್ಲ. ಕೊಲೆಯಾದವನ ಮೊಬೈಲಿನಿಂದ ಪೋಷಕರಿಗೆ ಆರೋಪಿಗಳು ಸಂದೇಶವನ್ನ ಕಳುಹಿಸಿದ್ದಾರೆ. ನಾನು ದುಡಿಯಲು ಹೋಗುತ್ತಿದ್ದೇನೆ. ಹುಡುಕಬೇಡಿ ಎಂದು ಮೃತ ಶರತ್ ನ ಮೊಬೈಲಿಂದ ಮೆಸೇಜ್ ಹಾಕಿ, ಆ ಮೊಬೈಲ್ ಅನ್ನು ಲಾರಿಯೊಂದರ ಮೇಲೆ ಎಸೆದಿದ್ರು. ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಹೊರಟು ಹೋಗಿತ್ತು. ಕಾಲಾಂತರದಲ್ಲಿ ಮೊಬೈಲ್ ( MOBILE ) ಸ್ವಿಚ್ ಆಫ್ ಆದ ಮೇಲೆ ಅದು ಸಂಪರ್ಕವೇ ಸಿಕ್ಕಿಲ್ಲ.ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆ ಎಂದೇ ನಂಬಿದ್ದರು ಶರತ್ ನ ಪೋಷಕರು. ಶರತ್ ಬೆಂಗಳೂರಿನ ಕೋಣನಕುಂಟೆ ನಿವಾಸಿ. ಕೊಲೆ ಮಾಡಿದ್ದ ಅರೋಪಿ ಹಾಗೂ ಕೊಲೆಗೀಡಾಗಿದ್ದ ಯುವಕ ಇಬ್ಬರ ಹೆಸರು ಶರತ್. ಕಬ್ಬನ್ ಪಾರ್ಕ್ ಪೊಲೀಸರು 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಶರತ್, ಮಂಜುನಾಥ್, ಶ್ರೀಧರ್, ವೆಂಕಟಾಚಲಪತಿ ಮತ್ತು ಧನುಷ್ ಎಂಬ ಅರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನು ಓದಿ : – ತನ್ನ ಮನೆಯಲ್ಲೇ ಚಿನ್ನ ಕದ್ದು ಪ್ರೇಯಸಿ ಜೊತೆ ಗೋವಾ ಪ್ರವಾಸ…!

 

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!