ಮೈಸೂರು ( mysore ) ವಿಶ್ವ ವಿದ್ಯಾಲಯದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೆಸರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಚಿನ್ನದ ಪದಕ ನೀಡಲು ನಿರ್ಧರಿಸಲಾಗಿದೆ.
ಸಿದ್ದರಾಮಯ್ಯ ಅವರ 75 ಅಮೃತ ಮಹೋತ್ಸವ ದತ್ತಿ ಚಿನ್ನದ ಪದಕ ಇದಾಗಿದ್ದು, 2022-23ನೇ ಸಾಲಿನಿಂದ ಎಲ್ಎಲ್ಬಿಯಲ್ಲಿ ಱಂಕ್ (Rank) ಪಡೆದವರಿಗೆ ನೀಡಲು ನಿರ್ಧರಿಸಲಾಗಿದೆ. ಸ್ವತಃ ಕಾನೂನು ಪದವೀಧರರಾಗಿರುವ ಸಿದ್ದರಾಮಯ್ಯ ಅವರು ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇದನ್ನೂ ಓದಿ : – ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬೊಮ್ಮಾಯಿ ಸಿಎಂ ಆಗಿ ಮುಂದುವರಿಯೋದು ಅಷ್ಟೇ ಸತ್ಯ – ಎಂ.ಪಿ ರೇಣುಕಾಚಾರ್ಯ
ಮೈಸೂರು ಗ್ರಾಮಾಂತರ ಅಧ್ಯಕ್ಷರ ಹೆಸರಿನಲ್ಲಿ ವಿಶ್ವ ವಿದ್ಯಾಲಯಕ್ಕೆ 1 ಲಕ್ಷ 5 ಸಾವಿರ ರೂಪಾಯಿ ದತ್ತಿ ನೀಡಲಾಗಿದೆ. ಸಿದ್ದರಾಮಯ್ಯನವರ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪದಕ ಸ್ಥಾಪಿಸಲು ಮನವಿ ಬಂದಿದೆ. ಪ್ರಸ್ತಾವನೆಯನ್ನು ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಮುಂದೆ ಮಂಡಿಸಲಾಗುವುದು ಮತ್ತು ಮುಂದಿನ ಘಟಿಕೋತ್ಸವದಲ್ಲಿ ಪದಕವನ್ನು ನೀಡಲಾಗುವುದು ಎಂದು ವಿವಿ ಉಪಕುಲಪತಿ ಪ್ರೊ.ಸಿ.ಹೇಮಂತಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : – ಬಿಹಾರದಲ್ಲಿ ಮಹಾಘಟಬಂಧನ್ 2.0- ನೂತನ ಸರ್ಕಾರದಲ್ಲಿ ತೇಜಸ್ವಿ ಯಾದವ್ ಡಿಸಿಎಂ?