ಹೂವಿನಹಡಗಲಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ವಶಕ್ಕೆ

ವಿಜಯನಗರದ (Vijayanagara) ಹೂವಿನಹಡಗಲಿ (Huvina hadagali) ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಹೂವಿನಹಡಗಲಿಯ ಮುಂಡರಗಿ ರಸ್ತೆಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂಡರಗಿ ಕಡೆಯಿಂದ ಹೂವಿನಹಡಗಲಿ ಮಾರ್ಗವಾಗಿ ಚಿತ್ರದುರ್ಗದ ಕಡೆಗೆ ತೆರಳುತ್ತಿದ್ದ ಲಾರಿಯನ್ನ ವಶಕ್ಕೆ ಪಡೆಯಲಾಗಿದೆ. 29.5 ಟನ್ ಅನ್ನಭಾಗ್ಯ ಅಕ್ಕಿ ( 8.44, 000 ಬೆಲೆ ಬಾಳುವ ಅಕ್ಕಿ) ವಶಕ್ಕೆ ಪಡೆಯಲಾಗಿದೆ. ಹೂವಿನಹಡಗಲಿ ಪೊಲೀಸರು ಲಾರಿ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೂವಿನ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : – ಹೊಸಪೇಟೆ ಹೊರವಲಯದ ಸುರಂಗ ಮಾರ್ಗ – ಕೇಂದ್ರ ಸಾರಿಗೆ ಸಚಿವ ಗಡ್ಕರಿ ಮೆಚ್ಚುಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!