ಸಂಪಂಗಿರಾಮನಗರ (Sampangi ramnagara ) ದಲ್ಲಿ ಸುಷ್ಮಾ ಭಾರದ್ವಾಜ್ (Sushma bharadwaj) ಎಂಬ ಮಹಿಳೆ ತನ್ನ ಮಗುವನ್ನು ನಾಲ್ಕನೇ ಮಹಡಿ ಮೇಲಿಂದ ಎಸೆದು ಕೊಂದಿದ್ದಳು. ಘಟನೆ ಸಿಸಿ ಟಿವಿಯಲ್ಲೂ ಸೆರೆಯಾಗಿತ್ತು. ಸುಷ್ಮಾಳ ಆರೋಗ್ಯದ ಪರಿಸ್ಥಿತಿಯ ರಿಪೋರ್ಟ್ ನಲ್ಲಿ ಈಗ ಅಚ್ಚರಿ ಮಾಹಿತಿ ಬೆಳಕಿಗೆ ಬಂದಿದೆ.
ಬುದ್ಧಿಮಾಂದ್ಯ ಮಗುವೆಂದು ಹೆತ್ತ ತಾಯಿಯೇ ನಾಲ್ಕೈದು ವರ್ಷದ ಮಗುವನ್ನು ನಾಲ್ಕನೇ ಮಹಡಿ ಮೇಲಿಂದ ಬಿಸಾಕಿ ಕೊಂದಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಸಂಪಂಗಿ ರಾಮನಗರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ನಲ್ಲಿ ಈ ಕೊಲೆಗಡುಕಿ ತಾಯಿಯ ಕಳ್ಳಾಟದ ರಹಸ್ಯ ಬಯಲಾಗಿದೆ. ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಮೃತ ಮಗು ಬುದ್ಧಿಮಾಂದ್ಯ ಮಗುವಲ್ಲ, ಅದು AUTISM ಎಂಬ ಖಾಯಿಲೆಯಿಂದ ಬಳಲುತ್ತಿದ್ದ ಮಗುವಾಗಿತ್ತು. ಹೀಗಾಗಿ ಪ್ರತಿನಿತ್ಯ ಥೆರಫಿ ಮಾಡಿಸಲು ಮಗುವನ್ನು ತಾಯಿ ಸುಷ್ಮಾ ಕರೆದೊಯ್ತಿದ್ದರು. ಇದೇ ಕಾರಣಕ್ಕೆ ಮಗುವಿನಿಂದ ಬೇಸತ್ತು, ನೋಡಿಕೊಳ್ಳಲಾಗುವುದಿಲ್ಲ ಎಂದು ಮಗುವನ್ನು ತಾಯಿಯೇ ಕೊಂದಿದ್ದಾಳೆ ಎಂದು ಉಲ್ಲೇಖಿಸಲಾಗಿದೆ. ಮಗುವನ್ನು ನೋಡಿಕೊಳ್ಳುವುದರಲ್ಲೇ ಜೀವನ ಕಳೆದರೆ ತನ್ನ ಲೈಫ್ ಎಂಜಾಯ್ ಮಾಡಲು ಆಗುವುದಿಲ್ಲ ಎಂದು ನಿರ್ಧಾರ ಮಾಡಿದ ಆರೋಪಿ ಸುಷ್ಮಾ ಮಗುವನ್ನು ಕೊಲ್ಲಲು ಮುಂದಾಗಿದ್ದಾಳೆ. ಎರಡು ಬಾರಿ ಮಗು ಬಿಸಾಡಲು ಹೊರಗಡೆ ಬಂದು ನೋಡಿದ್ದಾಳೆ. ಬಳಿಕ ಅಡ್ಡಲಾಗಿದ್ದ ಮರವನ್ನು ಗಮನಿಸಿ ಅಲ್ಲಿಂದ ದೂರ ಬಂದು ಕಲ್ಲಿನ ಗಟ್ಟಿ ನೆಲದ ಸ್ಥಳವನ್ನು ನೋಡಿ ಮಗುವನ್ನು ಬಿಸಾಡಿರೋದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ : – ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ – ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಪ್ರವಾಸ
ಎಲ್ಲಾದ್ರು ಕಾರ್ಯಕ್ರಮಗಳಿಗೆ ಹೋದಾಗ ಮಗುವನ್ನು ನೋಡಿ ಸಂಬಂಧಿಕರು ನುಡಿಯುತ್ತಿದ್ದ ಕೊಂಕಿನ ಮಾತಿಂದ ಬೇಸತ್ತಿದ್ದ ಸುಷ್ಮಾ. ಸುಖ ಜೀವನ, ಲೈಫ್ ಎಂಜಾಯ್ ಮಾಡಬೇಕೆನ್ನಿಸಿ ಈ ಕೃತ್ಯಕ್ಕೆ ಮುಂದಾಗಿದ್ದಾಳೆ.ಆರೋಪಿ ತಾಯಿ ಸುಷ್ಮಾಳ ಆರೋಗ್ಯದ ಪರಿಸ್ಥಿತಿಯ ರಿಪೋರ್ಟ್ ನಲ್ಲಿ ಅಚ್ಚರಿ ಮಾಹಿತಿ ಬೆಳಕಿಗೆ ಬಂದಿದೆ. ಸುಷ್ಮಾ ಫಿಟ್ ಅಂಡ್ ಟ್ರಯಲ್ ಎಂದು ನಿಮಾನ್ಸ್ ರಿಪೋರ್ಟ್ ನೀಡಿದೆ. ಘಟನೆ ಬಳಿಕ ಸುಷ್ಮಾಳನ್ನು ಪೊಲೀಸರು ನಿಮಾನ್ಸ್ ಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದು ರಿಪೋರ್ಟ್ ಬಂದಿದೆ.
ಇದನ್ನೂ ಓದಿ : – ಬಿಜೆಪಿ ಜನ ಸಂಕಲ್ಪ ಯಾತ್ರೆಯಿಂದ ದೂರ ಉಳಿದ ನಳೀನ್ ಕುಮಾರ್ ಕಟೀಲ್