ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ 2 ಕಾರುಗಳ ನಡುವೆ ಸಣ್ಣ ಅಪಘಾತ ವಿಚಾರಕ್ಕೆ ಗಲಾಟೆ ನಡೆದಿದೆ.
ಈ ವೇಳೆ ಕಾರು ಚಾಲಕಿ ಶ್ವೇತಾ ಎನ್ನುವ ಮಹಿಳೆಯು ಬಾನೆಟ್ ಮೇಲೆ ವ್ಯಕ್ತಿ ಬಿದ್ದರೂ 2 ಕಿ.ಮೀ. ಕಾರು ಚಲಾಯಿಸಿಕೊಂಡು ಹೋಗಿ ಅಮಾನವಿಯತೆ ಮೆರೆದಿದ್ದಾಳೆ. ಸಿಗ್ನಲ್ ನಲ್ಲಿ ದರ್ಶನ್ ಎಂಬುವವರ ಸ್ವಿಫ್ಟ್ ಕಾರಿಗೆ ನೆಕ್ಸಾನ್ ಕಾರು ಚಾಲಕಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಟಾಟಾ ನೆಕ್ಸಾನ್ ಕಾರು ಚಲಾಯಿಸುತ್ತಿದ್ದ ಚಾಲಕಿ ಶ್ವೇತಾ, ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದ ದರ್ಶನ್ ಜತೆ ಕೆಟ್ಟದಾಗಿ ಮಧ್ಯಬೆರಳು ತೋರಿಸಿ ಕೆಟ್ಟದಾಗಿ ವರ್ತಿಸಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಕೋಪಗೊಂಡ ದರ್ಶನ್ ಟಾಟಾ ನೆಕ್ಸಾನ್ ಕಾರು ಹಿಂಬಾಲಿಸಿ ಮಹಿಳೆಯ ಕಾರು ಅಡ್ಡಗಟ್ಟಿ ಮಹಿಳೆಯ ಅಸಭ್ಯ ವರ್ತನೆ ಬಗ್ಗೆ ಪ್ರಶ್ನಿಸಿದ್ದಾನೆ. ಇದನ್ನು ಓದಿ :- ಅನಂತ್ ಅಂಬಾನಿ ನಿಶ್ಚಿತಾರ್ಥ – ಸ್ಟೇಜ್ ಮೇಲೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ
ಕೋಪಗೊಂಡ ಶ್ವೇತಾ ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ ದರ್ಶನ್ ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ. ಈ ವೇಳೆ ಏಕಾಏಕಿ ಟಾಟಾ ನೆಕ್ಸಾನ್ ಕಾರು ಚಲಾಯಿಸುತ್ತಿದ್ದ ಮಹಿಳೆ ಶ್ವೇತಾ ಬಚಾವ್ ಆಗಲು ನೆಕ್ಸಾನ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದ ದರ್ಶನ್ ಅವರನ್ನು ಸುಮಾರು 1 ಕಿಲೋ ಮೀಟರ್ ವರೆಗೂ ಕಾರು ಚಲಾಯಿಸಿಕೊಂಡು ಹೋಗಿದ್ದಾಳೆ. ದರ್ಶನ್ ಕಡೆಯವರು ಬಂದು ಕಾರ್ ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಗ್ಲಾಸು ಗಳನ್ನು ಹೊಡೆದು ಹಾಕಿ ಜೊತೆಗೆ ಶ್ವೇತಾ ರವರ ಗಂಡ ಪ್ರಮೋದ್ ರವರಿಗೆ ಕೈನಿಂದ ಗುದ್ದಿ ಗಾಯಪಡಿಸಿದ್ದಾರೆ. ನಂತರ ಪೊಲೀಸರು ಎರಡು ಕಡೆಯವರನ್ನು ಠಾಣೆಗೆ ಕರೆದುಕೊಂಡು ಬಂದು ದೂರನ್ನು ಪಡೆದಿದ್ದಾರೆ. ಘಟನೆ ಸಂಬಂಧ ಐವರು ಆರೋಪಿಗಳಾದ ಪ್ರಿಯಾಂಕ, ದರ್ಶನ್, ಸುಜನ್, ಯಶವಂತ, ವಿನಯ್ ಸೇರಿ ಐವರನ್ನು ಬಂಧಿಸಲಾಗಿದೆ.
ಇದನ್ನು ಓದಿ :- ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಮಾಜಿ ಡಿ.ಸಿ.ಎಂ ಜಿ.ಪರಮೇಶ್ವರ್