ಬೀದರ್, ಕಲಬುರಗಿ ಜಿಲ್ಲೆಯಲ್ಲಿ ನಿರಂತರವಾಗಿ ರಾಶಿಯಂತ್ರಕ್ಕೆ ಸಿಲುಕಿ ಸರಣಿ ಸಾವುಗಳಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ವಿಧಾನಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 18 ವರ್ಷದ ಯುವತಿ ಸಾವೀಗಿಡಗಿದ್ದಾಳೆ. ರಾಶಿಯಂತ್ರ ಅಂದ್ರೆ, ಕಡಲೆ, ತೊಗರಿ ಕಟಾವು ಮಾಡುವ ಯಂತ್ರ. ರೈತರು ಈ ಯಂತ್ರವನ್ನ ಖರೀದಿ ಮಾಡ್ತಾರೆ. ಆದ್ರೆ ರೈತರಿಗೆ ಈ ಯಂತ್ರ ಉಪಯೋಗ ಮಾಡಲು ಬರಲ್ಲ. ಮಹಿಳೆ ಕೂದಲು ಹಾಗೂ ಚೂಡಿದಾರದ ದುಪ್ಪಟ ಸಿಲುಕಿ ಸಾವಿಗೀಡಾಗಿದ್ದಾಳೆ.
ಈ ಯಂತ್ರ ಉಪಯೋಗಕ್ಕೆ ಯಾವುದೇ ರೀತಿಯ ತರಭೇತಿ, ಜಾಗೃತಿ ಇಲ್ಲ ಇದಕ್ಕೆ ತರಬೇತಿ ಹಾಗೂ 5 ಲಕ್ಷ ಪರಿಹಾರ ನೀಡುವಂತೆ ಸಭಾಧ್ಯಕ್ಷರ ಮೂಲಕ ಈಶ್ವರ್ ಖಂಡ್ರೆ ಮನವಿ ಮಾಡಿದ್ರು. ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಬಿ, ಸಿ ಪಾಟೀಲ್ ಕಲಬುರಗಿಯಲ್ಲಿ ರಾಶಿಯಂತ್ರಕ್ಕೆ ಸಿಕ್ಕು 18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ. ಈ ನೋವನ್ನ ನಾವು ಹಂಚಿಕೊಳ್ಳುತ್ತೇವೆ. ಈ ಪ್ರಕರಣ ಆಕಸ್ಮಿಕ ಪ್ರಕರಣ ಅಂತ ದಾಖಲಾಗಿದೆ. ಈ ಪ್ರಕರಣವನ್ನ ವಿಶೇಷ ಪ್ರಕರಣ ಎಂದು ಪರಿಹಾರ ಕೊಡಿಸಬಹುದು. ಈ ಬಗ್ಗೆ ದಾಖಲಾತಿಗಳನ್ನ ತರಿಸಿ, ಮುಖ್ಯಮಂತ್ರಿ ಪರಿಹಾರದಲ್ಲಿ ಕೊಡುವ ಅವಕಾಶ ಇದೆ ಎಂದು ಹೇಳಿದ್ರು. ಕೂಲಿಕಾರ್ಮಿಕರು ಆಕಸ್ಮಿಕವಾಗಿ ಸಾವಿಗೀಡಾದ್ರೆ 2 ಲಕ್ಷ ಪರಿಹಾರ ಇದೆ.
ನಾನು ಮನವಿ ಮಾಡುತ್ತಿರುವುದು ಕನಿಷ್ಠ 5 ಲಕ್ಷ ಪರಿಹಾರ ನೀಡಬೇಕು. ನಿಮ್ಮ ಇಲಾಖೆಗೆ ಹೇಳಿ ವಿಡಿಯೋ ಮೂಲಕ ಜನಜಾಗೃತಿ ಮಾಡಿ ಎಂದು ಈಶ್ವರ್ ಖಂಡ್ರೆ ಮನವಿ ಮಾಡಿದ್ರು.