ಖ್ಯಾತ ಮಲಯಾಳಂ ಗಾಯಕ ( Malayam singer ) ಇದವಾ ಬಶೀರ್ ( Idava basheer ) ವೇದಿಕೆಯಲ್ಲಿ ಹಾಡು ಹಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೇ 28, ಶನಿವಾರದಂದು (Saturday ) ಈ ಘಟನೆ ನಡೆದಿದೆ. ಹಾಡುವಾಗಲೇ ವೇದಿಕೆಯಲ್ಲಿ ಬಶೀರ್ ಅವರು ಕುಸಿದು ಬಿದ್ದರು.
ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ, ಆ ಹೊತ್ತಿಗಾಗಲೇ ಬಶೀರ್ ಇಹಲೋಕ ತ್ಯಜಿಸಿದ್ದರು.ಕೇರಳ ರಾಜ್ಯದಲ್ಲಿ ಆರ್ಕೆಸ್ಟ್ರಾಗಳು ಜನಪ್ರಿಯವಾಗುವಲ್ಲಿ ಬಶೀರ್ ಅವರ ಪಾತ್ರ ಪ್ರಮುಖವಾಗಿತ್ತು. 87 ವರ್ಷ ವಯಸ್ಸಿನ ಬಶೀರ್ ಅವರು, ಕೇರಳದ ಅಲಪ್ಪುಳ ಜಿಲ್ಲೆಯ ಬ್ಲೂ ಡೈಮಂಡ್ ಆರ್ಕೆಸ್ಟ್ರಾದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ವೇಳೆ ವೇದಿಕೆ ಮೇಲೆ ಹಾಡು ಹೇಳುತ್ತಿದ್ದರು. ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್ (Yesudas) ಹಾಡಿದ್ದ ‘ಮಾನಾ ಹೋ ತುಮ್ ಬೇಹದ್ ಹಸೀನ್..’ ಹಾಡನ್ನು ಹಾಡುವಾಗಲೇ ಬಶೀರ್ ಅವರು ಕುಸಿದು ಬಿದ್ದಿದ್ದಾರೆ.ಹಾಡನ್ನು ಹಾಡುವ ವೇಳೆ ಬಶೀರ್ ಇದ್ದಕ್ಕಿದ್ದಂತೆಯೇ ಕುಸಿದಿದ್ದಾರೆ. ಕೂಡಲೇ ವೇದಿಕೆ ಮೇಲೆ ಕುಳಿತುಕೊಳ್ಳಲು ಯತ್ನಿಸಿದ್ದಾರೆ. ಅವರ ಕೈನಲ್ಲಿ ಇದ್ದ ಮೈಕ್ ಕೆಳಗೆ ಬಿದ್ದಿದ್ದೆ. ಈ ವೇಳೆ ವೇದಿಕೆ ಬಳಿ ಇದ್ದವರು ಬಶೀರ್ ಅವರ ರಕ್ಷಣೆಗೆ ಧಾವಿಸಿದ್ದಾರೆ. ಕೂಡಲೇ ಬಶೀರ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಇದನ್ನೂ ಓದಿ : – ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ – ಬೆಂಗಳೂರು ಉತ್ತರ ವಿವಿ ಪರೀಕ್ಷೆ ಮುಂದೂಡಿಕೆ