ಶಿವಮೊಗ್ಗ ಜಿಲ್ಲೆ ಉಡುತಡಿ ತಾಲ್ಲೂಕಿನ ಯಶಸ್ಸ್ (yashas ) ಎಂಬ ಯುವಕ ಮಣ್ಣನ್ನು ಉಳಿಸಲು ಪಾದಯಾತ್ರೆ ಮಾಡಿದ್ದಾನೆ. ಶಿವಮೊಗ್ಗದಿಂದ ಕೊಯಂಬತ್ತೂರಿನ ಇಶಾ ಪೌಂಡೇಶನ್ ವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾನೆ.
ಈಗಾಗಲೇ ೧೦೦೮ ಕೀ.ಮೀ ಪಾದಯಾತ್ರೆ ಕ್ರಮಿಸಿರುವ ಯುವಕ, ಕೋಲಾರದಲ್ಲಿ ಮಣ್ಣು ಉಳಿಸುವಂತೆ ಯಶಸ್ಸ್ ಮನವಿ ಮಾಡಿದ್ದಾನೆ. ವಿಶ್ವಸಂಸ್ಥೆ ಪ್ರಕಾರ ಭೂಮಿಯಲ್ಲಿ ೪೦-೫೦ ವರ್ಷಗಳ ಮಣ್ಣು ಮಾತ್ರ ಉಳಿದಿದೆ, ೨೦೪೦ ರ ವೇಳೆಗೆ ಮಣ್ಣು ತನ್ನ ಸತ್ವವನ್ನ ಕಳೆದುಕೊಳ್ಳುತ್ತದೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಮಣ್ಣು ಕ್ಷೀಣಿಸುತ್ತಿರುವ ಬಗ್ಗೆಯೂ ಯಶಸ್ಸ್ ಪತ್ರ ಬರೆದಿದ್ದ .
ಮಣ್ಣಿನ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿ ನೀಡಲು ಯುವಕ ಮನವಿ ಮಾಡಿದ್ದಾನೆ . ಯುವ ಪೀಳಿಗೆ ಮಣ್ಣಿನ ಅಳಿವಿನ ಬಗ್ಗೆ ಜಾಗೃತಿ ಮೂಡಿಸಿ ಅದನ್ನ ಉಳಿಸುವ ಅಭಿಯಾನಕ್ಕೆ ಬೆಂಬಲಿಸುವಂತೆ ಯುವಕನ ಮನವಿ ಮಾಡಿದ್ದಾನೆ . ಇದನ್ನೂ ಓದಿ : – ಜನರ ಸಮಸ್ಯೆಯನ್ನೇ ಆಲಿಸದ ಬೊಮ್ಮಾಯಿ – ಸಿಎಂ ಸಿಟಿ ರೌಂಡ್ಸ್ ನೋಡಿ ಕಕ್ಕಾಬಿಕ್ಕಿಯಾದ ಅಧಿಕಾರಿಗಳು