ಚಾಮರಾಜನಗರ : ಕೊರೊನಾ ಮಹಾಮಾರಿಯಿಂದ ದೂರ ಇರಲು ಬೀದಿಯ ನಾಲ್ಕು ಮೂಲೆಗಳಲ್ಲಿ ದಿಗ್ಬಂಧನ, ಸಾಂಬ್ರಾಣಿ ಧೂಪ ಹಾಕುತ್ತಿರುವ ಘಟನೆ ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಉಪ್ಪಾರ ಸಮುದಾಯದ ಜನರು ಕಳೆದ 7 ದಿನಗಳಿಂದ ನಿತ್ಯ ಸಂಜೆ ಬೀದಿಯ ನಾಲ್ಕು ಮೂಲೆಗಳಲ್ಲಿ ಪೂಜೆ ಮಾಡಿ ಬಳಿಕ ಇಬ್ಬರು ಬಾಲಕರ ಮೂಲಕ ಸಾಂಬ್ರಾಣಿ ತುಂಬಿದ ಮಡಿಕೆಗಳನ್ನು ಹಿಡಿಸಿ ಬೀದಿಗೆಲ್ಲಾ ಧೂಪ ಹಾಕುತ್ತಿದ್ದಾರೆ. ಭಯ-ಭಕ್ತಿಯಿಂದ ಬೀದಿಯ ಜನರು ಸಾಂಬ್ರಾಣಿ ಧೂಪ ಹಾಕಿ ಮಹಾಮಾರಿ ಬರದಂತೆ ಬೇಡಿಕೊಳ್ಳುತ್ತಿದ್ದಾರೆ.
ಇನ್ನು, ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಚಾಮರಾಜನಗರದ ಗಂಗಾಮತಸ್ಥರ ಬೀದಿಯಲ್ಲಿ ಕೋಳಿಗಳನ್ನು ಬಲಿ ಕೊಡಲಾಗಿತ್ತು. ಕೊಳ್ಳೇಗಾಲದಲ್ಲಿ ಕೊರೊನಾ ಮಾರಮ್ಮನನ್ನೇ ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ, ಇವರು ಮಹಾಮಾರಿಯಿಂದ ದೂರ ಇರಲು ಸಾಂಬ್ರಾಣಿ ಮೊರೆ ಹೋಗಿದ್ದಾರೆ.