ಚಿಕ್ಕಬಳ್ಳಾಪುರ (Chikkaballapura) ದಲ್ಲಿ ಕೆಲಸ ಕೊಡಿಸುವುದಾಗಿ ಕಿರಾತಕ ಗ್ಯಾಂಗ್ ಯುವತಿಯಿಂದ 2,39000 ಹಣವನ್ನು ವಸೂಲಿ ಮಾಡಿದ್ದರು. ನೌಕರಿ ವೆಬ್ ಸೈಟ್ (Naukari website) ನಲ್ಲಿ ಶಿಡ್ಲಘಟ್ಟ ತಾಲೂಕಿನ ಗೊರಮೊಡುಗು ಗ್ರಾಮದ ಯುವತಿ ಸ್ವವಿವರವನ್ನು ನೊಂದಾಯಿಸಿದ್ದರು.
ಈಶಾ ಕಂಪನಿಯಲ್ಲಿ ಟೆಲಿಕಾಲರ್ ಕೆಲಸ ಕೊಡಿಸುವುದಾಗಿ ನಂಬಿಸಿ ಆರೋಪಿಗಳು ಮೋಸ ಮಾಡಿದ್ದರು. ಜಾಯಿನಿಂಗ್ ಫೀಸ್ ಮತ್ತು ಐಡಿ ಕಾರ್ಡ್ ಫೀಸ್ ಎಂದು ಹಂತಹಂತವಾಗಿ ವಸೂಲಿ ಮಾಡಿದ್ದರು . ಕ್ರೈಂ ಡಿಪಾರ್ಟ್ಮೆಂಟ್ ನಿಂದ ಕರೆ ಮಾಡಿರುವುದಾಗಿ ನಂಬಿಸಿ ಹರೀಶ್ ಮತ್ತೆ ಯುವತಿಯಿಂದ 55000 ಸಾವಿರವನ್ನು ವಸೂಲಿ ಮಾಡಿದ್ದ.
ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಶಿಡ್ಲಘಟ್ಟ ಪೊಲೀಸರು ದೂರನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವಲ್ಲಿ ಶಿಡ್ಲಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರ ಮೂಲದ ಚೇತನ್ ಗಣೇಶ್ ,ಪ್ರದೀಪ್ ,ಆನಂದ್ ಎಂಬುವರಿಂದ ಕೃತ್ಯ ನಡೆದಿದೆ. ಆರೋಪಿಗಳಿಂದ 1 ,30000 ಹಣ ವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : – ಖಾಸಗಿ ಬಸ್ ಪಲ್ಟಿ – ಸ್ಧಳದಲ್ಲೇ ಇಬ್ಬರು ಸಾವು